alex Certify
ಕನ್ನಡ ದುನಿಯಾ       Mobile App
       

Kannada Duniya

ತಂಬಾಕು ಪ್ರಿಯರಿಗೆ ಶಾಕ್ ಕೊಟ್ಟ ಯೋಗಿ ಆದಿತ್ಯನಾಥ್

yogi-adityanath-in-office_650x400_41490175295-1

ಉತ್ತರಪ್ರದೇಶದ ಸರ್ಕಾರಿ ಕಚೇರಿಗಳಲ್ಲಿ ಇನ್ಮೇಲೆ ಯಾರೂ ತಂಬಾಕು ತಿನ್ನುವಂತಿಲ್ಲ. ಗುಟ್ಕಾ, ಪಾನ್ ಮಸಾಲಾ ಜಗಿಯುವಂತಿಲ್ಲ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶ. ಲಖ್ನೋದ  ಹಳೆ ಸಿಎಂ ಕಚೇರಿಗೆ ದಿಢೀರ್ ಭೇಟಿ ಕೊಟ್ಟ ಯೋಗಿ, ಈ ಆದೇಶ ಹೊರಡಿಸಿದ್ದಾರೆ.

ಇವತ್ತು ಬೆಳಗ್ಗೆ ಯೋಗಿ ಹಳೆಯ ಸಿಎಂ ಕಚೇರಿಗೆ ಬಂದಿದ್ರು. ಮೆಟ್ಟಿಲುಗಳ ಮೇಲೆ, ಗೋಡೆಗಳಲ್ಲೆಲ್ಲ ಗುಟ್ಕಾ ಜಗಿದು ಉಗಿದಿರುವ ಕಲೆ, ಕೆಟ್ಟ ವಾಸನೆಯನ್ನು ಗಮನಿಸಿದ್ರು. ಕೇವಲ ಈ ಕಚೇರಿ ಮಾತ್ರವಲ್ಲ, ಉತ್ತರಪ್ರದೇಶದ ಎಲ್ಲಾ ಸರ್ಕಾರಿ ಆಫೀಸ್ ಗಳ ಸ್ಥಿತಿ ಕೂಡ ಇದೇ ರೀತಿ ಇದೆ ಅನ್ನೋದು ಆದಿತ್ಯನಾಥ್ ಅವರಿಗೆ ಅರಿವಾಗಿತ್ತು.

ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ ಯೋಗಿ ಹಾಗೂ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ತಂಬಾಕು ಸೇವನೆ ಮಾಡದಂತೆ ನಿಷೇಧ ಹೇರಿದ್ದಾರೆ. ಸ್ವಚ್ಛತಾ ಅಭಿಯಾನದ ಬಗ್ಗೆ ಈಗಾಗ್ಲೇ ಎಲ್ಲಾ ಸರ್ಕಾರಿ ಕಚೇರಿಗಳ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕೂಡ ಸರ್ಕಾರ ರವಾನಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...