alex Certify
ಕನ್ನಡ ದುನಿಯಾ       Mobile App
       

Kannada Duniya

ನಿಫಾ ಎಫೆಕ್ಟ್: ಸಂಬಂಧಿಕರು ದೂರ ಮಾಡಿದ ಶವಕ್ಕೆ ವೈದ್ಯರಿಂದ ಅಂತ್ಯ ಸಂಸ್ಕಾರ

ಕೇರಳದಲ್ಲಿ ನಿಫಾ ವೈರಸ್ ಆತಂಕ ಮುಂದುವರೆದಿದೆ. ನಿಫಾಕ್ಕೆ ಹೆದರಿ ಜನರು ರಕ್ತ ಸಂಬಂಧವನ್ನು ಮರೆಯುತ್ತಿದ್ದಾರೆ. ವೈರಸ್ ಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ವೈದ್ಯರನ್ನು ದೇವರು ಎನ್ನಲಾಗುತ್ತದೆ. ಕೇರಳದಲ್ಲಿ ವೈದ್ಯರು ದೇವರಾಗಿದ್ದಾರೆ. ಸಂಬಂಧಿಕರು ದೂರ ಮಾಡಿದ ಶವಕ್ಕೆ ವೈದ್ಯರು ಅಂತ್ಯಸಂಸ್ಕಾರ ಮಾಡ್ತಿದ್ದಾರೆ.

ಕೇರಳದ ಕೋಜಿಕೋಡದ ಆರೋಗ್ಯ ಅಧಿಕಾರಿ ಡಾಕ್ಟರ್ ಆರ್.ಎಸ್. ಗೋಪಕುಮಾರ್ ಶವಸಂಸ್ಕಾರದ ಜವಾಬ್ದಾರಿ ಹೊತ್ತಿದ್ದಾರೆ. ಗೋಪಕುಮಾರ್ 3 ಶವ ಸಂಸ್ಕಾರ ಮಾಡಿದ್ದಾರೆ. ಕೇರಳದಲ್ಲಿ ನಿಫಾ ವೈರಸ್ ಗೆ 17 ಮಂದಿ ಸಾವನ್ನಪ್ಪಿದ್ದು, ಕೋಜಿಕೋಡದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.

17 ವರ್ಷದ ಯುವಕನ ಶವ ಸಂಸ್ಕಾರ ಮಾಡಿರುವ ಗೋಪಕುಮಾರ್, ಯುವಕನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆ ಕೊನೆ ಬಾರಿ ಮಗನ ಮುಖ ನೋಡಲಾಗಲಿಲ್ಲ. ದುಃಖದಲ್ಲಿಯೇ ಆತನ ಅಂತ್ಯ ಸಂಸ್ಕಾರವನ್ನು ಹಿಂದೂ ಪದ್ಧತಿಯಂತೆ ಮಾಡಿದ್ದೇನೆ ಎಂದಿದ್ದಾರೆ ಗೋಪಕುಮಾರ್. 53 ವರ್ಷದ ವ್ಯಕ್ತಿ ಹಾಗೂ 19 ವರ್ಷದ ಮಹಿಳೆ ಅಂತ್ಯ ಸಂಸ್ಕಾರವನ್ನೂ ಇವರೇ ಮಾಡಿದ್ದಾರಂತೆ. ನಿಫಾ ವೈರಸ್ ನಿಂದ ಬಳಲುತ್ತಿರುವವರ ಬಳಿ ಹೋಗುವಾಗ ಜಾಗ್ರತೆ ಬೇಕು. ಅಂತಿಮ ಸಂಸ್ಕಾರದ ವೇಳೆಯೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕೆಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...