alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೀತು ಅಂತ್ಯಸಂಸ್ಕಾರ

ಇದು ಆನ್ಲೈನ್ ಯುಗ. ಬ್ಯಾಂಕ್ ಕೆಲಸ, ಶಾಪಿಂಗ್, ಟಿಕೆಟ್ ಬುಕ್ಕಿಂಗ್, ಸ್ನೇಹ, ಪ್ರೀತಿ ಹೀಗೆ ಎಲ್ಲವೂ ಆನ್ಲೈನ್ ನಲ್ಲಿ ನಡೆಯುತ್ತಿದೆ. ಈಗ ಆನ್ಲೈನ್ ನಲ್ಲಿಯೇ ಅಂತ್ಯಕ್ರಿಯೆ ಕೂಡ ನಡೆದಿದೆ. ಯಸ್, ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ಇಂಥ ಘಟನೆ ನಡೆದಿದೆ.

ಪಾಲ್ಗರ್ ನಲ್ಲಿ 65 ವರ್ಷದ ಮಹಿಳೆ ಸಾವನ್ನಪ್ಪಿದ್ದಳು. ಆಕೆ ಅಂತ್ಯ ಸಂಸ್ಕಾರವನ್ನು ಗುಜರಾತಿನಲ್ಲಿರುವ ಆಕೆ ಮಗಳು ಆನ್ಲೈನ್ ಮೂಲಕ ನೆರವೇರಿಸಿದ್ದಾಳೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತ್ಯಸಂಸ್ಕಾರ ನಡೆಸಿರುವ ಮಹಿಳೆ, ಕೊರಿಯರ್ ಮೂಲಕ ಅಸ್ತಿಯನ್ನು ತರಿಸಿಕೊಳ್ತಿದ್ದಾಳೆ. ಆನ್ಲೈನ್ ಅಂತ್ಯಸಂಸ್ಕಾರ ಈಗ ಚರ್ಚೆಗೆ ಕಾರಣವಾಗಿದೆ.

ಧೀರಜ್ ಪಾಟೀಲ್ ಹಾಗೂ ನೀರಾಬಾಯಿ ಪಟೇಲ್ ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ವಾಸವಾಗಿದ್ದಾರೆ. ಅವ್ರ ಏಕೈಕ ಪುತ್ರಿ ಗುಜರಾತಿನ ಅಹಮದಾಬಾದ್ ನಲ್ಲಿ ನೆಲೆಸಿದ್ದಾಳೆ. ಮಂಗಳವಾರ ಕೆಲಸದ ಮೇಲೆ ಧೀರಜ್ ಹೊರಗೆ ಹೋಗಿದ್ದರಂತೆ. ಈ ವೇಳೆ ನೀರಾಬಾಯಿ ಸಾವನ್ನಪ್ಪಿದ್ದಾಳೆ. ಗ್ರಾಮಸ್ಥರೆಲ್ಲ ಸೇರಿ ಮಗಳಿಗೆ ವಿಷ್ಯ ತಿಳಿಸಿದ್ದಾರೆ.

ಈಗ್ಲೇ ತವರಿಗೆ ಬರಲು ಸಾಧ್ಯವಿಲ್ಲ. ನೀವೆಲ್ಲ ಸೇರಿ ಅಂತ್ಯಸಂಸ್ಕಾರ ನೆರವೇರಿಸಿ. ವಿಡಿಯೋ ಕಾಲಿಂಗ್ ಮೂಲಕ ನಾನು ಇದನ್ನು ನೋಡ್ತೇನೆ ಎಂದ ಮಗಳು, ನಂತ್ರ ಅಸ್ತಿಯನ್ನು ಕೊರಿಯರ್ ಮಾಡಲು ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...