alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ ಆರ್ ಪಿ ಎಫ್ ಕ್ಯಾಂಪ್ ನ ಜಿಮ್ ಗೆ ನುಗ್ಗಿತ್ತು ಚಿರತೆ

ಕಾಡಿನಿಂದ ಬಂದ ಚಿರತೆಯೊಂದು ನಾಡಿಗೆ ನುಗ್ಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಐದು ವರ್ಷದ ಗಂಡು ಚಿರತೆ ಅರೆಯಾ ಮಿಲ್ಕ್ ಕಾಲೋನಿಯ ಎಸ್ ಆರ್ ಪಿ ಎಫ್ ಕ್ಯಾಂಪ್ ಗೆ ನುಗ್ಗಿತ್ತು.

ಕಾಡಂಚಿನ ಗಡಿಯಲ್ಲೇ ಈ ಕಾಲೋನಿಯಿದ್ದು, ಇಲ್ಲಿ ಎಸ್ ಆರ್ ಪಿ ಎಫ್ ಶಿಬಿರವಿದೆ. ಭಾನುವಾರ ಬೆಳಗ್ಗೆ ರಿಸರ್ವ್ ಪೊಲೀಸ್ ಕ್ಯಾಂಪ್ ನ ಸಿಬ್ಬಂದಿಯೊಬ್ಬರು ಜಿಮ್ ಮಾಡಲು ಹೋದಾಗ ಆ ಕೊಠಡಿಯ ಒಳಗೆ ಚಿರತೆ ಕೂತಿದ್ದನ್ನು ನೋಡಿದ್ದಾರೆ. ತಕ್ಷಣವೇ ಕೊಠಡಿ ಬಾಗಿಲು ಮುಚ್ಚಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕೆಲವೇ ಹೊತ್ತಲ್ಲಿ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ರು. ಸುಮಾರು ಎರಡು ಗಂಟೆಗಳವರೆಗೂ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಬೋನಿಗೆ ಬೀಳಿಸಲಾಯ್ತು. ಎಸ್ ಆರ್ ಪಿ ಎಫ್ ಸಿಬ್ಬಂದಿ ಮತ್ತು ಸ್ಥಳೀಯರು ಕಾರ್ಯಾಚರಣೆಗೆ ಸಾಥ್ ನೀಡಿದ್ರು.

ಬೋನಿಗೆ ಬಿದ್ದಿರುವ ಗಂಡು ಚಿರತೆ ಸುರಕ್ಷಿತವಾಗಿದ್ದು ಅದನ್ನು ಮತ್ತೆ ಕಾಡಿಗೆ ಬಿಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಈ ಏರಿಯಾದಲ್ಲಿ ಚಿರತೆ ಬರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಆರು ತಿಂಗಳಲ್ಲಿ ಯಶಸ್ವಿಯಾಗಿ ಹಿಡಿದ ನಾಲ್ಕನೆ ಚಿರತೆ ಇದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...