alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಟಿವಿ, ಪೇಪರ್ ನಲ್ಲಿ ಕಾಣಿಸಲ್ಲ ಈ ವಸ್ತುವಿನ ಜಾಹೀರಾತು

ಕೆಲವೇ ದಿನಗಳಲ್ಲಿ ಜಂಕ್ ಫುಡ್ ಜಾಹೀರಾತು ಬಂದ್ ಆಗಲಿದೆ. ಟಿವಿ, ಪತ್ರಿಕೆ, ರೆಡಿಯೋ ಸೇರಿದಂತೆ ಎಲ್ಲೂ ಜಂಕ್ ಫುಡ್ ಜಾಹೀರಾತು ಕಾಣಸಿಗುವುದಿಲ್ಲ. ಆಹಾರ ನಿಯಂತ್ರಕ ಎಫ್ಎಸ್ಎಸ್ಎ ಐ ಜಂಕ್ ಫುಡ್ ಜಾಹೀರಾತನ್ನು ಸಂಪೂರ್ಣ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

ಕೇಂದ್ರ ಸರ್ಕಾರ ಒಂದು ವೇಳೆ ಎಫ್ಎಸ್ಎಸ್ಎಐ ಪ್ರಸ್ತಾವನೆಯನ್ನು ಸ್ವೀಕರಿಸಿದ್ರೆ ಜಂಕ್ ಫುಡ್ ಮಾರಾಟ ಕಂಪನಿಗಳಿಗೆ ನಷ್ಟವಾಗಲಿದೆ. ಚಿಪ್ಸ್, ಬರ್ಗರ್, ಫಿಜ್ಜಾ, ಕೋಲ್ಡ್ ಡ್ರಿಂಕ್ಸ್ ಜಾಹೀರಾತುಗಳನ್ನು ಟಿವಿ, ಪತ್ರಿಕೆ, ರೆಡಿಯೋದಲ್ಲಿ ಪ್ರಸಾರ ಮಾಡುವ ಕಂಪನಿಗಳಿಗೆ ಇದ್ರಿಂದ ನಷ್ಟವಾಗಲಿದೆ.

ಎಫ್ ಎಸ್ ಎಸ್ ಎ ಐ ನೀಡಿರುವ ಪ್ರಸ್ತಾವನೆಯಲ್ಲಿ ಕೋಕಾ ಕೋಲಾ, ಪೆಪ್ಸಿ, ಮ್ಯಾಕ್ಡೊನಾಲ್ಡ್, ಬರ್ಗರ್ ಕಿಂಗ್, ಪಿಜ್ಜಾ ಹಟ್, ಡೊಮಿನೊ, ನೆಸ್ಲೆ, ಕೆಲ್ಲೋಗ್, ಹಿಂದೂಸ್ಥಾನ್ ಯೂನಿಲಿವರ್ ಹೆಸರುಗಳಿವೆ.

ಜಾಹೀರಾತುಗಳಿಗೆ ಮಕ್ಕಳು ಹೆಚ್ಚು ಆಕರ್ಷಿತರಾಗ್ತಾರೆ. ಜಾಹೀರಾತು ನೋಡಿ ಜಂಕ್ ಫುಡ್ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಅದ್ರಲ್ಲಿ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಂಶ ಹೆಚ್ಚಿರುವುದ್ರಿಂದ ಅದು ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರ್ತಿದೆ. ಹಾಗಾಗಿ ಜಂಕ್ ಫುಡ್ ಜಾಹೀರಾತುಗಳನ್ನು ಟಿವಿ, ಪತ್ರಿಕೆ, ರೇಡಿಯೋದಲ್ಲಿ ಪ್ರಸಾರ ಮಾಡದಂತೆ ಎಫ್ ಎಸ್ ಎಸ್ ಎ ಐ ಮನವಿ ಮಾಡಿದೆ.

ಈಗಾಗಲೇ 9 ದೊಡ್ಡ ಕಂಪನಿಗಳು ಕಾರ್ಟೂನ್ ಚಾನೆಲ್ ಗಳಲ್ಲಿ ಜಂಕ್ ಫುಡ್ ಜಾಹೀರಾತುಗಳನ್ನು ಪ್ರಸಾರ ಮಾಡ್ತಿಲ್ಲ. ಜಂಕ್ ಫುಡ್ ಮಕ್ಕಳಿಗೊಂದೇ ಅಲ್ಲ ಯುವಜನತೆಗೆ ಕೂಡ ಮಾರಕ ಎಂಬುದು ತಜ್ಞರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...