alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಕೊಡುವಂತೆ ಪ್ರಾರ್ಥಿಸಿ ಎ.ಟಿ.ಎಂ.ಗೆ ಪೂಜೆ

pooje-atm-del

ನವದೆಹಲಿ: ನೋಟ್ ಬ್ಯಾನ್ ಬಳಿಕ, ಜನಸಾಮಾನ್ಯರು ಹಣ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಹಾಗೂ ಎ.ಟಿ.ಎಂ. ಬಾಗಿಲು ಕಾಯುವುದೇ ಜನರಿಗೆ ಕೆಲಸವಾಗಿಬಿಟ್ಟಿದೆ.

ಬಹುತೇಕ ಎ.ಟಿ.ಎಂ.ಗಳು ಬಂದ್ ಆಗಿವೆ. ಬಾಗಿಲು ತೆರೆದ ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ. ಹಣ ಸಿಗದೇ ಕಂಗಾಲಾಗಿರುವ ಜನ ಸಾಮಾನ್ಯರು ಹಣ ಕೊಡುವಂತೆ ಪ್ರಾರ್ಥಿಸಿ, ಎ.ಟಿ.ಎಂ.ಗಳಿಗೆ ಪೂಜೆ ಸಲ್ಲಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ಎ.ಟಿ.ಎಂ.ಗಳಿಗೆ ಬಂದ ಜನ, ಹಾರ ಹಾಕಿ ಊದುಬತ್ತಿ, ಕರ್ಪೂರ ಬೆಳಗಿ ಹಣ ಕೊಡುವಂತೆ ಬೇಡಿಕೊಂಡಿದ್ದಾರೆ. ಡೋಲು ಬಾರಿಸಿದ್ದು ಎ.ಟಿ.ಎಂ. ಪರ ಘೋಷಣೆ ಕೂಗಿದ್ದಾರೆ.

ನಗದು ಕೊರತೆಯಿಂದಾಗಿ ಎ.ಟಿ.ಎಂ.ಗಳಲ್ಲಿ ಹಣ ಹಾಕಿದ ಕೂಡಲೇ ಖಾಲಿಯಾಗುತ್ತಿದೆ. ಇದರಿಂದಾಗಿ ಕಂಗಾಲಾದ ಜನ ಪೂಜೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...