alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾರ 10 ಕಠಿಣ ನಿರ್ಧಾರಗಳು….

amma

ಜಯಲಲಿತಾ ಸುಖಾಸುಮ್ಮನೆ ತಮಿಳುನಾಡಿಗೆ ಅಮ್ಮನಾಗಿಲ್ಲ. ಜನರು ಅವರನ್ನು ತಾಯಿ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ ಅಂದ್ರೆ ಜಯಲಲಿತಾ ಅಂತಹ ಜನಪರ ಕಾರ್ಯಗಳನ್ನು ಮಾಡಿದ್ದಾರೆ, ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಅದ್ಭುತ ಚೆಲುವೆ, ಜನಪ್ರಿಯ ನಟಿ, ಯಶಸ್ವಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಕೇವಲ ರಾಜಕಾರಣಿ ಮಾತ್ರವಲ್ಲ, ಅದೆಷ್ಟೋ ಜನರ ಪಾಲಿಗೆ ಭರವಸೆಯ ಬೆಳಕಾಗಿದ್ದರು. ಅವರ ಅಕಾಲಿಕ ಮರಣದಿಂದ ತಮಿಳುನಾಡಿಗೆ ಆಘಾತವಾಗಿದೆ.

ಜಯಲಲಿತಾ ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿ, ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳು, ಅವರಿಗಿದ್ದ ಧೈರ್ಯ, ಛಾತಿ ಎಲ್ಲರಿಗಿಂತ ಮಿಗಿಲಾದದ್ದು. ಜಯಲಲಿತಾ ಅವರಿಗೆ ಅದೆಷ್ಟು ಬೆಂಬಲಿಗರು ಇದ್ದರೆಂದ್ರೆ, ಅಮ್ಮ ಹತಾಶಗೊಂಡಾಗಲೂ ಅವರು ಜೊತೆಗಿದ್ದರು. ಇದಕ್ಕೆ ಕಾರಣ ಅವರ ಪ್ರಭಾವಿ ವ್ಯಕ್ತಿತ್ವ. ಜಯಲಲಿತಾ ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿಯೇ ಇತರ ಮಹಿಳಾ ರಾಜಕಾರಣಿಗಳಿಗಿಂತ ಭಿನ್ನವಾಗಿ, ಪ್ರಭಾವಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖ 10 ತೀರ್ಮಾನಗಳು ಯಾವುವು ಅನ್ನೋದನ್ನು ನೋಡೋಣ.

ತಮಿಳುನಾಡಿನಲ್ಲಿ ಮಹಿಳಾ ಪೇದೆಗಳು, ಮಹಿಳಾ ಅಧಿಕಾರಿಗಳನ್ನು ಜಯಲಲಿತಾ ಬೆಂಬಲಿಸಿದ್ದರು. ಕೇವಲ ಮಹಿಳಾ ಪೊಲೀಸರನ್ನೊಳಗೊಂಡ ಠಾಣೆಗಳನ್ನು ಆರಂಭಿಸಿದ್ದರು.

2001ರಲ್ಲಿ ಪ್ರತಿಭಟನೆಗಿಳಿದಿದ್ದ 2 ಲಕ್ಷ ಸರ್ಕಾರಿ ನೌಕರರನ್ನು ಒಂದೇ ಕ್ಷಣದಲ್ಲಿ ಕೆಲಸದಿಂದ ಕಿತ್ತುಹಾಕಿದ್ದರು.

2001ರಲ್ಲಿ ಲಾಟರಿ ಟಿಕೆಟ್ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿದ್ದರು. ಪಾನ್, ಗುಟ್ಕಾ ಮತ್ತು ಕ್ಯಾಸಿನೋಗಳಿಗೂ ನಿರ್ಬಂಧ ಹೇರಿದ್ದರು.

2001 ರ ಜೂನ್ 21ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ಜಯಾ ಅದೇ ದಿನ ಬೆಳಗಿನ ಜಾವ 2 ಗಂಟೆಗೆ ಭ್ರಷ್ಟಾಚಾರ ಆರೋಪದ ಮೇಲೆ ಕರುಣಾನಿಧಿ ಅವರನ್ನು ಬಂಧಿಸಿದ್ದರು.

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ವಿದೇಶಿ ಆಧಾರಿತ ಆಟೋಮೊಬೈಲ್ ಪ್ಲಾಂಟ್ ಗಳನ್ನು ಪರಿಚಯಿಸಿದವರು ಜಯಲಲಿತಾ. 1995ರಲ್ಲಿ ಫೋರ್ಡ್ ಯುಎಸ್ಎಯನ್ನು ಚೆನ್ನೈನಲ್ಲಿ ಪರಿಚಯಿಸಿದ್ರು. ಈಗ ಚೆನ್ನೈ ಜಗತ್ತಿನ ಎಲ್ಲಾ ಉತ್ಪಾದಕರ ತಾಣವಾಗಿದೆ. ಭಾರತದ ಶೇ.40 ರಷ್ಟು ವಾಹನಗಳು ಅಲ್ಲೇ ತಯಾರಾಗುತ್ತವೆ.

ವಿಧಾನಸಭೆಯಲ್ಲಿ ಡಿಎಂಕೆ ಸಚಿವನೊಬ್ಬ ಅವರ ಸೀರೆ ಎಳೆದಿದ್ದ. ಈ ಪ್ರಕರಣ ನಡೆದ ಬಳಿಕ ಅವರು ವಿಧಾಸಭೆಯ ಮೆಟ್ಟಿಲು ಹತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ಅಸೆಂಬ್ಲಿಗೆ ಎಂಟ್ರಿ ಕೊಡುವುದಾಗಿ ಶಪಥ ಮಾಡಿದ್ದ ಜಯಲಲಿತಾ ಅದನ್ನು ಸಾಧಿಸಿ ತೋರಿಸಿದ್ರು.

ದೇವಾಲಯಗಳಲ್ಲಿ ಮುಗ್ಧ ಪ್ರಾಣಿಗಳನ್ನು ಬಲಿಕೊಡದಂತೆ ನಿಷೇಧಿಸಿದ್ದರು. ಆದ್ರೆ 2004ರಲ್ಲಿ ಅವರು ಸೋಲು ಅನುಭವಿಸಿದ ಬಳಿಕ ಆ ನಿಷೇಧಕ್ಕೂ ಬ್ರೇಕ್ ಬಿದ್ದಿತ್ತು.

2016ರಲ್ಲಿ ಕೊಟ್ಟ ಮಾತಿನಂತೆ ಜಯಲಲಿತಾ 500 ಮದ್ಯದಂಗಡಿಗಳನ್ನು ಮುಚ್ಚಿಸಿದ್ರು.

ರೈತರಿಗೆ ಹೇರಳವಾಗಿ ಕೊಡಲಾಗ್ತಾ ಇದ್ದ ಉಚಿತ ವಿದ್ಯುತ್ ಮೇಲೂ ನಿರ್ಬಂಧ ಹೇರಿದ್ದರು.

ಅಮ್ಮಾ ಕ್ಯಾಂಟೀನ್ ಅನ್ನು ಪರಿಚಯಿಸಿದ ಜಯಲಲಿತಾ, ಅತ್ಯಂತ ಅಗ್ಗದ ಬೆಲೆಯಲ್ಲಿ ಬಡವರಿಗೆ ಆಹಾರ ಪೂರೈಸುವ ವ್ಯವಸ್ಥೆ ಮಾಡಿದ್ದರು. ಇದರಿಂದ ಪ್ರೇರೇಪಣೆ ಪಡೆದ ಕೆಲ ರಾಜ್ಯಗಳೂ ಇಂತಹ ಯೋಜನೆಯನ್ನು ಅಳವಡಿಸಿಕೊಂಡ್ವು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...