alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಡ್ರೋನ್ ಹಾರಾಟಕ್ಕೂ ಬೇಕು ಲೈಸೆನ್ಸ್…!

ಕೇಂದ್ರ ವೈಮಾನಿಕ ಸಚಿವಾಲಯ ವಾಣಿಜ್ಯಾತ್ಮಕ ಉದ್ದೇಶಗಳಿಗಾಗಿ ಹಾರಲಿರುವ ಡ್ರೋನ್ ಗಳಿಗಾಗಿ ಕೆಲ ನಿಯಮಾವಳಿಗಳನ್ನ ಜಾರಿ ಮಾಡಿದೆ. ಆ ಮೂಲಕ 2018ರ ಡಿಸೆಂಬರ್ ನಿಂದ ಡ್ರೋನ್ ಬಳಕೆಯ ಮೇಲೆ ಕೇಂದ್ರ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನ ಜಾರಿ ಮಾಡಲಿದೆ. ಇನ್ಮುಂದೆ ಡ್ರೋನ್ ಗಳ ತೂಕಕ್ಕೆ ಅನುಗುಣವಾಗಿ ಅವುಗಳನ್ನ ವರ್ಗೀಕರಣ ಮತ್ತು ಅವುಗಳ ಬಳಕೆಗೆ ಲೈಸೆನ್ಸ್ ವಿತರಣೆ ಕಾರ್ಯ ನಡೆಯಲಿದೆಯಂತೆ.

ತೂಕಕ್ಕೆ ಅನುಗುಣವಾಗಿ ಡ್ರೋನ್ ಗಳನ್ನ ಐದು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. 250 ಗ್ರಾಂ ನಿಂದ 2 ಕೆಜಿ ತೂಕದ ಎರಡು ಪ್ರತ್ಯೇಕ ವರ್ಗ ಸೇರಿದಂತೆ 150 ಕೆಜಿ ತೂಕದ ಡ್ರೋನ್ ಗಳನ್ನ ಒಟ್ಟು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ನ್ಯಾನೋ ಮತ್ತು ಮೈಕ್ರೋ ವಿಭಾಗಗಳನ್ನ ಮಕ್ಕಳ ಆಟದ ಸಾಮಾಗ್ರಿಗಳಾಗಿ ಬಳಕೆ ಮಾಡೋದಕ್ಕೆ ಅನುಮತಿ ನೀಡಲಾಗುತ್ತದೆ.

ಇದರ ಹೊರತಾಗಿ ಮಿಕ್ಕೆಲ್ಲಾ ಮಾದರಿಯ ಡ್ರೋನ್ ಬಳಕೆದಾರರು ತಮ್ಮ ಯೂನಿಕ್ ಐಡೆಂಟಿಫಿಕೇಶನ್ ನಂಬರ್ ಮೂಲಕ ವಿಮಾನ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಲೈಸೆನ್ಸ್ ಪಡೆದುಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಕನಿಷ್ಠ 10ನೇ ತರಗತಿ ಓದಿರುವ ಮತ್ತು ಇಂಗ್ಲೀಷ್ ಜ್ಞಾನ ಲೈಸೆನ್ಸ್ ಪಡೆದುಕೊಳ್ಳೋದಕ್ಕೆ ಕಡ್ಡಾಯವಾಗಿದೆ.

ನ್ಯಾನೋ ಡ್ರೋನ್ ಗಳ ಹಾರಾಟ ಭೂಮಿಯಿಂದ 50 ಅಡಿಗಳ ಎತ್ತರಕ್ಕೆ ಮತ್ತು ಮೈಕ್ರೋ ಡ್ರೋನ್ ಗಳ ಹಾರಾಟ 200 ಅಡಿಗಳ ಒಳಗೆ ಇರಬೇಕಂತೆ. ಇತರೆ ಡ್ರೋನ್ ಗಳ ಹಾರಾಟ 400 ಅಡಿಗಳ ಒಳಗೆ ಇರಬೇಕಂತೆ. ಕೆಲ ಪ್ರದೇಶಗಳನ್ನ ಡ್ರೋನ್ ಹಾರಾಟದಿಂದ ನಿಷೇಧಿಸಲಾಗಿದ್ದು, ಆ ವಲಯದಲ್ಲಿ ಡ್ರೋನ್ ಹಾರಾಟ ಶಿಕ್ಷಾರ್ಹ ಅಪರಾಧವಾಗಲಿದೆ. ವಿಮಾನ ನಿಲ್ದಾಣ, ಗಡಿ ರೇಖೆ, ದೆಹಲಿಯ ವಿಜಯ್ ಚೌಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಡ್ರೋನ್ ಹಾರಾಟ ನಿಷೇಧಕ್ಕೊಳಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...