alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಉಳಿಸಲು ಹೀಗೆಲ್ಲಾ ಮಾಡ್ತಿದ್ದಾರೆ ಜನ…!

ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್ ದರದ ಬಿಸಿಯಿಂದ ತಪ್ಪಿಸಿಕೊಳ್ಳಲು, ಸಾರ್ವಜನಿಕರು ಭಿನ್ನ, ವಿಭಿನ್ನ ಪ್ರಯತ್ನಗಳಿಗೆ ಕೈಹಾಕಿದ್ದಾರೆ‌.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವೆಡೆ, ಪೆಟ್ರೋಲ್ ಉಳಿಸಲು ಕಾರಿನ ಎಸಿ ಆಫ್ ಮಾಡಿಕೊಂಡು ಓಡಿಸುತ್ತಿದ್ದಾರೆ‌. ಇನ್ನು ಕೆಲವರು ಪೆಟ್ರೋಲ್ ನಿಂದ ಗ್ಯಾಸ್ ಎಂಜಿನ್ ಗೆ ಬದಲಾಯಿಸಿಕೊಳ್ಳುತ್ತಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ರಾಷ್ಟ್ರಾದ್ಯಂತ ಪ್ರತಿಭಟನೆಗಳು ನಡೆದರೂ, ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ, ಅನಿವಾರ್ಯವಾಗಿ‌ ಅನೇಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಒಡಿಸ್ಸಾ ಮೂಲದ ಕಲ್ಯಾಣ್ ಚಕ್ರವರ್ತಿ ಪ್ರಕಾರ, ಎಸಿ ಆಫ್ ಮಾಡಿಕೊಂಡರೆ ಸುಮಾರು, 2-3 ಲೀಟರ್ ಪೆಟ್ರೋಲ್ ಪ್ರತಿನಿತ್ಯ ಉಳಿಸಬಹುದಾಗಿದೆ. ಆದ್ದರಿಂದ ಪೆಟ್ರೋಲ್ ಬಿಸಿಯಿಂದ ತಪ್ಪಿಸಿಕೊಳ್ಳಲು ಎಸಿ ಆಫ್ ಮಾಡಿಕೊಂಡಿ ಗಾಡಿ ಓಡಿಸುತ್ತಾರಂತೆ.

ಇನ್ನು ದೆಹಲಿಯ ಬ್ರಿಜ್ ನಂದನ್ ಅವರು, ಪೆಟ್ರೋಲ್ ತಲೆ ಬಿಸಿಯೇ ಬೇಡವೆಂದು ಸ್ಕೂಟರ್ ಬಿಟ್ಟು ಸೈಕಲ್ ಏರಿ ತಿಂಗಳಿಗೆ 2 ಸಾವಿರ ಉಳಿಸಿದರೆ, ಸ್ವಂತಕ್ಕೆ ಪೆಟ್ರೋಲ್ ವಾಹನ ಹೊಂದಿರುವ ಗುವಾಹಟಿಯ ಲಾರಿ ಡ್ರೈವರ್, ನೆರೆರಾಜ್ಯ ಮೇಘಾಲಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇರುವುದರಿಂದ, ಪ್ರತಿಬಾರಿ ಮೇಘಾಲಯಕ್ಕೆ‌ ತೆರಳಿದಾಗ 100 ಲೀಟರ್ ಪೆಟ್ರೋಲ್ ತುಂಬಿಸಿಕೊಂಡು ಬರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...