alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿರುವ ಕೈದಿಯಿಂದ ಮುಖ್ಯಮಂತ್ರಿಗೆ ಬೆದರಿಕೆ ಪತ್ರ

50 ಕೋಟಿ ರೂ. ನೀಡುವಂತೆ ಬೆದರಿಕೆ ಪತ್ರವೊಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಬಂದಿದೆ. ಅದರ ಮೂಲ ಪತ್ತೆಗೆ ಹೊರಟ ಪೊಲೀಸರಿಗೆ ಶಾಕ್ ಆಗಿದ್ದು, ಆ ಪತ್ರ ಬರೆದಿದ್ದು ಬಿಲಾಸ್‌ಪುರ ಜಿಲ್ಲೆಯ ಜೈಲಿನಲ್ಲಿರುವ ಓರ್ವ ಕೈದಿ ಎಂಬ ಸಂಗತಿ ಬೆಳಕಿಗೆ ಬಂದಿದೆ.

40 ವರ್ಷದ ಪುಷ್ಪೇಂದ್ರ ನಾಥ್ ಚೌಹಾಣ್ ಎಂಬ ಕೈದಿ ಪೋಸ್ಟ್ ಮೂಲಕ ಪತ್ರ ಕಳಿಸಿದ್ದಾನೆ. ಆ ಪತ್ರ ಆ.25 ರಂದು ಒಡಿಶಾ ಪೊಲೀಸರ ಕೈಸೇರಿದೆ. ಪ್ರಕರಣವೀಗ ತನಿಖಾ ಹಂತದಲ್ಲಿರುವ ಕಾರಣದಿಂದ ಪತ್ರದಲ್ಲಿದ್ದ ವಿವರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಬಿಲಾಸ್‌ಪುರ ಜೈಲಿನ ಸೂಪರಿಂಟೆಂಡೆಂಟ್ ಆರಿಫ್ ಶೇಖ್ ಹೇಳಿದ್ದಾರೆ.

ಡಕಾಯಿತಿ, ಕೊಲೆ ಪ್ರಕರಣಗಳ ಅಡಿಯಲ್ಲಿ 2009 ರಿಂದ ಜೈಲಲ್ಲಿರುವ ಚೌಹಾಣ್‌ನನ್ನು ತನಿಖೆಗೊಳಪಡಿಸಿದಾಗ ಈತನೇ ಪತ್ರ ಬರೆದ ವ್ಯಕ್ತಿ ಎಂಬುದು ಪೊಲೀಸರಿಗೆ ತಿಳಿದುಬಂದಿದೆ. ಜನರ ಗಮನ ಸೆಳೆಯುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಆತ ಮಾನಸಿಕವಾಗಿ ಗೊಂದಲಕ್ಕೊಳಗಾಗಿದ್ದು, ಈ ಹಿಂದೆ ಒಡಿಶಾದ ಜಿಲ್ಲಾಧಿಕಾರಿಗೂ ಇಂತಹ ಪತ್ರ ಬರೆದಿದ್ದ ಎಂಬುದು ತಿಳಿದುಬಂದಿದೆ. ಪ್ರಕರಣದ ಹೆಚ್ಚಿನ ವಿಚಾರಣೆ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...