alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮ್ಮಾ’ ನ ಆರೋಗ್ಯಕ್ಕಾಗಿ ಮುಳ್ಳು ಹಾಸಿನ ಮೇಲೆ ಮಲಗಿದ ಅಭಿಮಾನಿ

bed-of-throneಅನಾರೋಗ್ಯಕ್ಕೊಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕಳೆದ ಸೆಪ್ಟೆಂಬರ್ 22 ರಿಂದ ಚೆನ್ನೈನ ಅಪೋಲೊ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಆರೋಗ್ಯಕ್ಕೆ ಪ್ರಾರ್ಥಿಸಿ ಅಭಿಮಾನಿಗಳು ಹಾಗೂ ಎಐಎಡಿಎಂಕೆ ಕಾರ್ಯಕರ್ತರು ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರಲ್ಲದೇ ಜಯಲಲಿತಾರವರು ದಾಖಲಾಗಿರುವ ಅಪೋಲೊ ಆಸ್ಪತ್ರೆ ಬಳಿ ಕೆಲವರು ಕಾದು ಕುಳಿತಿದ್ದಾರೆ.

ಈ ಮಧ್ಯೆ ಮಧುರೈನ ಎಐಎಡಿಎಂಕೆ ಕಾರ್ಯಕರ್ತ ಹಾಗೂ ಜಯಲಲಿತಾರ ಅಭಿಮಾನಿಯಾಗಿರುವ 45 ವರ್ಷದ ಇರುಳಂಡಿ ಎಂಬವರು ‘ಅಮ್ಮಾ’ ಆರೋಗ್ಯಕ್ಕೆ ಪ್ರಾರ್ಥಿಸಿ ವಿಶಿಷ್ಟವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶನಿವಾರದಂದು ವಗೈ ನದಿ ತೀರದಲ್ಲಿರುವ ಪಿಚಿ ಅಮ್ಮಾನ್ ದೇವಾಲಯದ ಆವರಣದಲ್ಲಿ ಮುಳ್ಳಿನ ಹಾಸಿಗೆ ಮೇಲೆ ಮಲಗಿದ್ದು, ಸತತ 24 ಗಂಟೆಗಳ ಕಾಲ ಯಾವುದೇ ಆಹಾರ ಸೇವಿಸದೆ ತಮ್ಮ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಧುರೈ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಎಐಎಡಿಎಂಕೆ ಕಾರ್ಯಕರ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...