alex Certify
ಕನ್ನಡ ದುನಿಯಾ       Mobile App
       

Kannada Duniya

‘ಫ್ರೆಂಡ್ ಶಿಪ್ ಡೇ’ಗೆ 45 ಲಕ್ಷ ರೂ. ಹಂಚಿದ ಬಾಲಕ: ಮಗನ ಕೊಡುಗೆ ಕಂಡು ಶಾಕ್ ಆದ ತಂದೆ

ಜಬಲ್ಪುರ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ 10ನೇ ತರಗತಿ ಓದುತ್ತಿದ್ದ ಬಾಲಕ ಫ್ರೆಂಡ್ ಶಿಫ್ ಡೇ ಗಾಗಿ ಬರೋಬ್ಬರಿ 45 ಲಕ್ಷ ರೂ. ಗಳನ್ನು ತನ್ನ ಸ್ನೇಹಿತರಿಗೆ ಹಂಚಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

ಜಮೀನು ಮಾರಿ ಬಂದಿದ್ದ 60 ಲಕ್ಷ ರೂ. ಹಣವನ್ನು ಬೀರುವಿನಲ್ಲಿ ಇರಿಸಿದ್ದರು. ಇದರಲ್ಲಿ 45 ಲಕ್ಷ ರೂ. ಎತ್ತಿಕೊಂಡು ಹೋದ ಅವರ ಮಗ 15 ಲಕ್ಷ ರೂ.ಗಳನ್ನು ದಿನಗೂಲಿ ನೌಕರರೊಬ್ಬನ ಮಗನಿಗೆ, 3 ಲಕ್ಷ ರೂ.ವನ್ನು ಹೋಂ ವರ್ಕ್‌ ಮುಗಿಸಿದ ಸ್ನೇಹಿತನಿಗೆ ಸ್ನೇಹಿತರ ದಿನಾಚರಣೆಗೆ ಉಡುಗೊರೆಯಾಗಿ ನೀಡಿದ್ದಾನೆ. ಫೋನ್, ಬ್ರೇಸ್ ಲೆಟ್ ಗಳನ್ನು ಕೊಟ್ಟಿದ್ದು, ಇನ್ನಷ್ಟು ಹಣವನ್ನು ಕಷ್ಟದಲ್ಲಿರುವವರಿಗೆ ಹಂಚಿದ್ದಾನೆ.

ಬೀರು ತೆಗೆದು ನೋಡಿದ ತಂದೆ ಹಣವಿಲ್ಲದ್ದನ್ನು ಗಮನಿಸಿ ಶಾಕ್ ಆಗಿದ್ದಾರೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಮಗನ ಫ್ರೆಂಡ್ ಶಿಪ್ ಡೇ ಕೊಡುಗೆ ಬೆಳಕಿಗೆ ಬಂದಿದೆ. ಹಣ ಪಡೆದುಕೊಂಡವರಿಗೆ 5 ದಿನಗಳ ಕಾಲಾವಕಾಶ ನೀಡಿರುವ ಪೊಲೀಸರು ಎಲ್ಲ ಹಣ ವಾಪಸ್ ನೀಡುವಂತೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...