alex Certify
ಕನ್ನಡ ದುನಿಯಾ       Mobile App
       

Kannada Duniya

7 ವರ್ಷಗಳ ನಂತ್ರ ಜಿ.ಬಿ. ರಸ್ತೆಯಿಂದ ಹೊರ ಬಂದ್ಲು ಮಹಿಳೆ

ದೆಹಲಿ ಮಹಿಳಾ ಆಯೋಗದ ಸಹಾಯದಿಂದ 24 ವರ್ಷದ ಅನುಷಾ 7 ವರ್ಷಗಳ ನಂತ್ರ ದೆಹಲಿ ಜಿ.ಬಿ. ರೋಡ್ ನಿಂದ ಹೊರಗೆ ಬಂದಿದ್ದಾಳೆ. ನರಕದಿಂದ ಹೊರ ಬಂದಿರುವ ಅನುಷಾ ಹೊಸ ಜೀವನ ಸಾಗಿಸಲು ಮುಂದಾಗಿದ್ದಾಳೆ. ಶೀಘ್ರದಲ್ಲಿಯೇ ದೆಹಲಿಯಿಂದ ಕರ್ನಾಟಕಕ್ಕೆ ಬರಲಿರುವ ಅನುಷಾ ತನ್ನ ಒಂದು ವರ್ಷದ ಮಗನೊಂದಿಗೆ ಹೊಸ ಜೀವನ ಆರಂಭಿಸಲಿದ್ದಾಳೆ.

ಅನುಷಾ ಜಿ.ಬಿ. ರೋಡ್ ನ ಕೋಟಾ ಸಂಖ್ಯೆ 50ರಲ್ಲಿ ವಾಸವಾಗಿದ್ದಳು. ಅನುಷಾ ಬಿ ಎಸ್ಸಿ ಪದವೀಧರೆ. ಇಂಗ್ಲೀಷ್ ಚೆನ್ನಾಗಿ ಮಾತನಾಡ್ತಾಳೆ. 7 ವರ್ಷಗಳ ಹಿಂದೆ ಕೆಲಸ ಕೊಡಿಸುವುದಾಗಿ ಅನುಷ್ಕಾಳನ್ನು ವ್ಯಕ್ತಿಯೊಬ್ಬ ದೆಹಲಿಗೆ ಕರೆ ತಂದಿದ್ದ. ನಂತ್ರ 50 ಸಾವಿರಕ್ಕೆ ಮಹಿಳೆಯೊಬ್ಬಳಿಗೆ ಅನುಷ್ಕಾಳನ್ನು ಮಾರಾಟ ಮಾಡಿದ್ದ.

ಅನುಷ್ಕಾಳಿಗೆ ಜಿ.ಬಿ. ರೋಡ್ ನಲ್ಲಿರುವುದು ಇಷ್ಟವಿರಲಿಲ್ಲ. ಆದ್ರೆ 50 ಸಾವಿರಕ್ಕೆ ಅನುಷ್ಕಾಳನ್ನು ಖರೀದಿ ಮಾಡಿದ್ದ ಮಹಿಳೆ ಹಣ ನೀಡುವಂತೆ ಪೀಡಿಸಿದ್ದಳು. ಈ ವೇಳೆ ಅನುಷಾಗೆ ಅಶೋಕ್ ಎಂಬಾತನ ಪರಿಚಯವಾಗಿತ್ತು. ಇಬ್ಬರು ಲಿವ್ ಇನ್ ನಲ್ಲಿದ್ದರು. ಕುಡಿತಕ್ಕೆ ದಾಸನಾಗಿದ್ದ ಅಶೋಕ್, ಅನುಷಾ ತಂದ ಹಣವನ್ನೆಲ್ಲ ಕುಡಿತಕ್ಕೆ ಹಾಳು ಮಾಡುತ್ತಿದ್ದ. ಈ ಮಧ್ಯೆ ಅನುಷಾ ಅಮ್ಮನಾಗಿದ್ದಾಳೆ. ಮಗನನ್ನು ತಂದೆ ಮನೆಗೆ ಕಳುಹಿಸಿದ ಅನುಷಾ ಜಿ.ಬಿ. ರಸ್ತೆಯಿಂದ ಓಡಿ ಬರಲು ನಿರ್ಧರಿಸಿದ್ದಳು. ಆದ್ರೆ ಅಶೋಕ್ ಇದಕ್ಕೆ ಬಿಡಲಿಲ್ಲ. ಆಗ ಮಹಿಳಾ ಆಯೋಗಕ್ಕೆ ಕರೆ ಮಾಡಿದ ಅನುಷಾ ಸಹಾಯ ಕೇಳಿದ್ದಳು.

ಸ್ಥಳಕ್ಕೆ ಬಂದ ಮಹಿಳಾ ಆಯೋಗದ ಸದಸ್ಯರು ಅನುಷಾಳನ್ನು ರಕ್ಷಿಸಿದ್ದಾರೆ. ಮೂರು ದಿನಗಳ ಹಿಂದೆ ಜಿ.ಬಿ. ರೋಡ್ ನಿಂದ ಮುಕ್ತಳಾಗಿರುವ ಅನುಷಾ ಹೊಸ ಜೀವನದ ಕನಸು ಕಾಣ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...