alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗ ಸಂಗಾತಿಯಿಂದಲೇ ಫ್ರಾನ್ಸ್ ಪ್ರವಾಸಿಗನ ಹತ್ಯೆ

ತಮಿಳುನಾಡಿನ ತಂಜಾವೂರು ಜಿಲ್ಲೆಯ ಗ್ರಾಮವೊಂದರಲ್ಲಿ ಫ್ರಾನ್ಸ್‌ ದೇಶದ ಪ್ರವಾಸಿಗನ ಅರ್ಧ ಸುಟ್ಟ ಶವ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಕಾಲುವೆಯೊಂದರಲ್ಲಿ ಫ್ರಾನ್ಸ್‌ ನಾಗರಿಕ 50 ವರ್ಷದ ಎಂ ಪಿರೆರ್‌ ಬೌಂಟಿಯರ್‌ ಶವ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹತ್ಯೆ ಸಂಬಂಧ ಆತನ ಸಲಿಂಗ ಸಂಗಾತಿ 29 ವರ್ಷದ ತಿರುಮಗನ್ ಎಂಬಾತನನ್ನು ಬಂಧಿಸಲಾಗಿದೆ.

ತಿರುಮಗನ್‌ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ. ತಾನೇ ಪಿರೆರ್‌ನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪಿರೆರ್‌ ಹಾಗೂ ತಿರುಮಗನ್‌ ಪರಸ್ಪರ ಇಷ್ಟಪಟ್ಟಿದ್ದು, ಅನೈತಿಕ ಸಂಬಂಧದಲ್ಲಿ ತೊಡಗಿದ್ದರು. ಆ.5 ರಂದು ಕುಡಿದ ಮತ್ತಿನಲ್ಲಿ ಇಬ್ಬರೂ ಜಗಳವಾಡಿದ್ದಾರೆ. ಈ ವೇಳೆ ತಿರುಮಗನ್‌ ನಡೆಸಿದ ದಾಳಿಯಲ್ಲಿ ಪಿರೆರ್‌ ಸಾವನ್ನಪ್ಪಿದ್ದಾನೆ. ಘಟನೆಯನ್ನು ಮುಚ್ಚಿಡಲು ಪಿರೆರ್‌ ಶವಕ್ಕೆ ತಿರುಮಗನ್‌ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...