alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಿಂದ್ಲೇ ಪತ್ನಿಗೆ ಅದ್ಭುತ ಗಿಫ್ಟ್ ಕಳಿಸಿಕೊಟ್ಟ ಖೈದಿ

taj-mahal

ಮನಸ್ಸಿದ್ದಲ್ಲಿ ಮಾರ್ಗವಿದೆ ಅನ್ನೋ ಮಾತು ಅಕ್ಷರಶಃ ಸತ್ಯ. ಇದಕ್ಕೆ ಜೀವಂತ ನಿದರ್ಶನ ಉತ್ತರಪ್ರದೇಶದ ಮಹಾರಾಜ್ಗಂಜ್ ಜೈಲಿನಲ್ಲಿರುವ ಫ್ರಾನ್ಸ್ ಮೂಲದ ಖೈದಿ.

ಈತ ಜೈಲಿನಲ್ಲಿದ್ದುಕೊಂಡೇ ಬೆಂಕಿ ಕಡ್ಡಿಯ ಸಹಾಯದಿಂದ ತನ್ನ ಪತ್ನಿಗಾಗಿ ತಾಜ್ ಮಹಲ್ ನಿರ್ಮಿಸಿದ್ದಾನೆ. 30,000 ಬೆಂಕಿ ಕಡ್ಡಿ ಹಾಗೂ 2 ಕೆಜಿ ಫೆವಿಕಾಲ್ ಬಳಸಿ ಈ ತಾಜ್ ಮಹಲ್ ನಿರ್ಮಿಸಿದ್ದಾನೆ. ಸತತ 3 ತಿಂಗಳು ಶ್ರಮಪಟ್ಟು ತಾಜ್ ಮಹಲ್ ತಯಾರಿಸಿರುವ ಫ್ರಾನ್ಸ್ ಮೂಲದ ಖೈದಿ ಆಲ್ಬರ್ಟ್ ಪಾಸ್ಕಲ್ ಶೈನ್, ತನ್ನ ಪತ್ನಿಗೆ ಹೊಸ ವರ್ಷದ ಉಡುಗೊರೆಯಾಗಿ ಅದನ್ನು ಕಳಿಸಿಕೊಟ್ಟಿದ್ದಾನೆ.

ಆಲ್ಬರ್ಟ್ ಕಳೆದ ಒಂದು ವರ್ಷದಿಂದ ಸೆರೆವಾಸ ಅನುಭವಿಸುತ್ತಿದ್ದಾನೆ. 2014 ರಲ್ಲಿ ಭಾರತ-ನೇಪಾಳ ಗಡಿಯಲ್ಲಿ ಅಕ್ರಮವಾಗಿ ಚರಸ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಲ್ಬರ್ಟ್ ಸಿಕ್ಕಿಬಿದ್ದಿದ್ದ. ಅವನ ಬಳಿಯಿದ್ದ 3 ಕೆಜಿ ಚರಸ್ ವಶಪಡಿಸಿಕೊಳ್ಳಲಾಗಿತ್ತು. ಆಘಾತಕಾರಿ ವಿಚಾರ ಅಂದ್ರೆ ಆಲ್ಬರ್ಟ್ ಏಡ್ಸ್ ಮಹಾಮಾರಿಯಿಂದ ಬಳಲುತ್ತಿದ್ದಾನೆ.

ಎಚ್ ಐವಿ ಎರಡನೇ ಹಂತದಲ್ಲಿದ್ದು, ಯಾವಾಗಲೂ ಬೇಸರದಿಂದ ಇರುತ್ತಿದ್ದ. ಅಷ್ಟೇ ಅಲ್ಲ ಭಾಷೆಯ ಸಮಸ್ಯೆಯಿಂದಾಗಿ ಸಹಖೈದಿಗಳೊಂದಿಗೆ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಕ್ಯಾನ್ ವಾಸ್ ಮೇಲೆ ಅಂದವಾದ ಚಿತ್ರವೊಂದನ್ನು ಬಿಡಿಸಿದ್ದ. ಅದನ್ನು ನೋಡಿದ ಸಹಖೈದಿಗಳು ತಾಜ್ ಮಹಲ್ ನಿರ್ಮಿಸುವಂತೆ ಪ್ರೋತ್ಸಾಹಿಸಿದ್ರು. ಇದಕ್ಕೆ ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡ ಸಹಕಾರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...