alex Certify
ಕನ್ನಡ ದುನಿಯಾ       Mobile App
       

Kannada Duniya

freedom251: ಗ್ರಾಹಕರ ಮುಂಗಡ ಹಣ ವಾಪಸ್ ಮಾಡಿದ ರಿಂಗಿಂಗ್ ಬೆಲ್

freedom251

ವಿಶ್ವದ ಅತ್ಯಂತ ಅಗ್ಗದ ಫೋನ್ ತಯಾರಿಕಾ ಕಂಪನಿ ರಿಂಗಿಂಗ್ ಬೆಲ್ ಒಂದಿಲ್ಲೊಂದು ವಿಷಯಕ್ಕೆ ಪ್ರತಿದಿನ ಸುದ್ದಿಯಾಗ್ತಾ ಇದೆ. ಕಡಿಮೆ ವೆಚ್ಚದಲ್ಲಿ ಫೋನ್ ಮಾರಾಟ ಮಾಡುತ್ತಿರುವ ಬಗ್ಗೆ ಅನೇಕ ವಿವಾದಗಳು ಎದ್ದಿವೆ. ಈ ನಡುವೆ ಕಂಪನಿ ಎಂಡಿ ಗ್ರಾಹಕರಿಗೊಂದು ಮಹತ್ವದ ವಿಷಯ ತಿಳಿಸಿದ್ದಾರೆ.

ಫೋನ್ ಖರೀದಿ ಮಾಡುವ ಆತುರದಲ್ಲಿ ಗ್ರಾಹಕರು ಮುಂಗಡ ಹಣ ನೀಡಿದ್ದಾರೆ. ಈಗ ಫೋನ್ ಕೈಸೇರುತ್ತೋ ಇಲ್ವೋ ಎಂಬ ಆತಂಕ ಶುರುವಾಗಿದೆ. ಆದ್ರೆ ಈ ಆತಂಕ ಬೇಡ. ಯಾಕೆಂದ್ರೆ ರಿಂಗಿಂಗ್ ಬೆಲ್, ಮುಂಗಡ ಹಣವನ್ನು ವಾಪಸ್ ಮಾಡ್ತಾ ಇದೆ.  30 ಸಾವಿರ ಗ್ರಾಹಕರಿಂದ ರಿಂಗಿಂಗ್ ಬೆಲ್ ಕಂಪನಿ ತಲಾ 251 ಮುಂಗಡ ಹಣವನ್ನು ಪಡೆದಿತ್ತು. ಈಗ ಎಲ್ಲರ ಹಣವನ್ನೂ ವಾಪಸ್ ಮಾಡಿದೆ.

30 ಸಾವಿರ ಗ್ರಾಹಕರಿಗೆ ಹಣ ವಾಪಸ್ ಮಾಡಿರುವ ಬಗ್ಗೆ ಕಂಪನಿಯ ಎಂಡಿ ಸ್ಪಷ್ಟಪಡಿಸಿದ್ದಾರೆ. ಫ್ರೀಡಂ 251 ಸ್ಮಾರ್ಟ್ ಫೋನ್ ಡಿಲೆವರಿಯಾದ ನಂತ್ರ ಹಣ ಪಡೆಯುವುದಾಗಿ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...