alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ನಡೆದಿದೆ ಬೆಚ್ಚಿಬೀಳಿಸುವಂಥ ದುರಂತ

ಗೋ ಕಾರ್ಟ್ ಚಕ್ರಕ್ಕೆ ಕೂದಲು ಸಿಕ್ಕಿಹಾಕಿಕೊಂಡಿದ್ರಿಂದ ಪಂಜಾಬ್ ನ ಬತಿಂಡಾದಲ್ಲಿ 28 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ. ಪಿಂಜೋರ್ ನಲ್ಲಿರೋ ಯದವಿಂದ್ರ ಗಾರ್ಡನ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಪುನೀತ್ ಕೌರ್ ತನ್ನ ಪತಿ ಅಮರ್ ದೀಪ್ ಸಿಂಗ್ ಹಾಗೂ 2 ವರ್ಷದ ಮಗುವಿನ ಜೊತೆಗೆ ಬಂದಿದ್ಲು.

ಈ ಪಾರ್ಕ್ ನಲ್ಲಿ ಅವರು 4 ಗೋ ಕಾರ್ಟ್ ಗಳನ್ನು ಬುಕ್ ಮಾಡಿದ್ದರು. ಎಲ್ಲವೂ ಓಪನ್ ವೀಲ್ ಕಾರ್ಟ್ ಗಳು. ಪುನೀತ್ ಮತ್ತವಳ ಪತಿ ಒಂದು ಕಾರ್ಟ್ ನಲ್ಲಿ ಕುಳಿತಿದ್ರು. ಮಗು ಅಜ್ಜಿಯ ಜೊತೆಗೆ  ಬೇರೆ ಕಾರ್ಟ್ ನಲ್ಲಿ ಕುಳಿತಿತ್ತು. ಒಂದು ಸುತ್ತು ಮುಗಿಯುವಷ್ಟರಲ್ಲಿ ಪುನೀತ್ ಳ ತಲೆಗೂದಲು ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದೆ.

ತುಂಬಾ ಸ್ಪೀಡ್ ಆಗಿ ಕಾರ್ಟ್ ಚಲಿಸ್ತಾ ಇದ್ದಿದ್ರಿಂದ ತಲೆಯಿಂದ ಅವಳ ನೆತ್ತಿಯ ಚರ್ಮವೇ ಕಿತ್ತು ಬಂದಿದೆ. ಈ ದೃಶ್ಯ ನೋಡಿ ಅಲ್ಲಿ ಇದ್ದವರೆಲ್ಲಾ ಬೆಚ್ಚಿ ಬಿದ್ದಿದ್ರು. ಕೂಡಲೇ ಕಾರ್ಟ್ ನಿಲ್ಲಿಸಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ಮೃತಪಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...