alex Certify
ಕನ್ನಡ ದುನಿಯಾ       Mobile App
       

Kannada Duniya

ಪುನರ್ಜನ್ಮದ ಬಗ್ಗೆ ಹೇಳ್ತಾನೆ 4 ವರ್ಷದ ಬಾಲಕ

lavish

ಹರ್ಯಾಣದ ಜಲಾಲಪುರದಲ್ಲಿ ನಾಲ್ಕು ವರ್ಷಗಳ ಹಿಂದೆ ವಿನೋದ್ ಹಾಗೂ ಅವರ ಪತ್ನಿ ಮಂಜಿತ್ ಗೆ ಹುಟ್ಟಿದ ಲವಿಶ್ ತನ್ನ ಪುನರ್ಜನ್ಮದ ಬಗ್ಗೆ ಹೇಳ್ತಿದ್ದಾನೆ. ಎರಡು ವರ್ಷದವನಿದ್ದಾಗಲೇ ರಾಮರಾ, ರಾಮರಾ ಎನ್ನುತ್ತಿದ್ದ ಲವಿಶ್ ತಾಯಿ ಹೆಸರನ್ನು ಕಮಲಾ ಎನ್ನುತ್ತಿದ್ದನಂತೆ.

ದೊಡ್ಡವನಾಗ್ತಿದ್ದಂತೆ ಲವಿಶ್ ರಾಮ್ರಾಯೆ ರಾಮ್ರಾಯೆ ಎನ್ನುತ್ತಿದ್ದನಂತೆ. ಇದರಿಂದ ಸಂಶಯಗೊಂಡ ಕುಟುಂಬಸ್ಥರು ಆತನನ್ನು ಜಲಾಲಪುರದಿಂದ 7 ಕಿಲೋಮೀಟರ್ ದೂರವಿರುವ ರಾಮ್ರಾಯೆ ಊರಿಗೆ ಕರೆದುಕೊಂಡು ಹೋದ್ರಂತೆ. ಆಶ್ಚರ್ಯವೆಂದ್ರೆ ಲವಿಶ್ ತನ್ನ ಪುನರ್ಜನ್ಮದ ಮನೆಯ ದಾರಿಯನ್ನು ತಾನೇ ಹೇಳಿದ್ನಂತೆ.

ಹಿಂದಿನ ಜನ್ಮದ ಮನೆಗೆ ಹೋದ ಲವಿಶ್ ತಂದೆ-ತಾಯಿ, ಅಕ್ಕಪಕ್ಕದ ಮನೆಯವರನ್ನು ಗುರುತಿಸಿದ್ದಾನೆ. ಜೊತೆಗೆ ಮನೆಯ ತೋಟ ಹಾಗೂ ತಾನು ಸತ್ತ ಸ್ಥಳವನ್ನೂ ಹೇಳಿದ್ದಾನೆ.

ರಾಮ್ರಾಯೆಯಲ್ಲಿ ಜ್ಯೋತಿಸ್ವರೂಪ ಎಂಬುವವರ ಕುಟುಂಬವೊಂದು ನೆಲೆಸಿದೆ. ಅವರಿಗೆ ಸಂದೀಪ್ ಎಂಬ ಮಗನಿದ್ದ. 14 ವರ್ಷದವನಿದ್ದಾಗ ತೋಟದಲ್ಲಿ ಕರೆಂಟ್ ಶಾಕ್ ಹೊಡೆದು ಆತ ಸಾವನ್ನಪ್ಪಿದ್ದ. 2006ರಲ್ಲಿ ಸಂದೀಪ್ ಸಾವನ್ನಪ್ಪಿದ್ದ. ಸಂದೀಪ್ ಫೋಟೋ ನೋಡಿ ಲವಿಶ್ ಗುರುತು ಹಿಡಿದಿದ್ದಾನೆ. ಸಂದೀಪ್ ಮತ್ತೆ ಮನುಷ್ಯ ರೂಪವೆತ್ತಿದ್ದು ಸಂದೀಪ್ ಮನೆಯವರಿಗೆ ಖುಷಿ ತಂದಿದೆಯಂತೆ. ಆಗಾಗ ಲವಿಶ್ ಭೇಟಿ ಮಾಡುವುದಾಗಿ ಹೇಳಿರುವ ಕುಟುಂಬಸ್ಥರು ಲವಿಶ್ ನೋಡಿ ಪುನರ್ಜನ್ಮವಿದೆ ಎಂಬುದನ್ನು ನಂಬುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...