alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿವೇಗದ ರೈಲಿಗೆ ಹಾರಿಹೋಯ್ತು 4 ಆನೆಗಳ ಪ್ರಾಣ

ಅತಿವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ 4 ಆನೆಗಳು ಸಾವನ್ನಪ್ಪಿದ ಘಟನೆ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ನಡೆದಿದೆ.

ಶನಿವಾರ ರಾತ್ರಿ ಗುವಾಹಟಿ–ಸಿಲ್ ಚಾರ್ ಪ್ಯಾಸೆಂಜರ್ ರೈಲಿಗೆ ಆನೆಗಳು ಸಿಲುಕಿವೆ. ಹಬೈಪುರ್ ರೈಲ್ವೇ ನಿಲ್ದಾಣದ ಬಳಿ ಆನೆಗಳು ರೈಲು ಮಾರ್ಗದ ಮೇಲೆ ಸಾಗುವಾಗ, ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತಕ್ಕೆ 4 ಆನೆ ಬಲಿಯಾಗಿವೆ. ಜೊತೆಗೆ ರೈಲಿನ ಇಂಜಿನ್ ಮತ್ತು ಬೋಗಿಗಳು ಬೇರ್ಪಟ್ಟಿವೆ. ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ.

ಡಿಸೆಂಬರ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಗರ್ಭಿಣಿ ಆನೆ ಸೇರಿದಂತೆ 5 ಆನೆಗಳು ಸಾವನ್ನಪ್ಪಿದ್ದವು. ಕಳೆದ ವರ್ಷ ರೈಲಿಗೆ ಸಿಲುಕಿ ಕನಿಷ್ಠ 12 ಆನೆಗಳು ಮೃತಪಟ್ಟಿವೆ. ಅದಕ್ಕಿಂತ ಹಿಂದಿನ ವರ್ಷ 16 ಆನೆಗಳು ಸಾವು ಕಂಡಿದ್ದವು.

2011 ರ ಗಣತಿಯ ಪ್ರಕಾರ ಅಸ್ಸಾಂನಲ್ಲಿ 5620 ಆನೆಗಳಿವೆ. ಇದು ದೇಶದಲ್ಲೇ ಅತಿಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ. ರೈಲು ಅಪಘಾತಗಳಲ್ಲಿ ಇತ್ತೀಚೆಗೆ ಹೆಚ್ಚು ಆನೆಗಳು ಬಲಿಯಾಗ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...