alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ದಿನ ಮನೆಗೆ ಬಂದ್ರು ನಾಲ್ವರು ಸೊಸೆಯಂದಿರು

ಉತ್ತರಾಖಂಡದ ಉತ್ತರಕಾಶಿ ಬ್ಲಾಕ್ ನಲ್ಲಿ ಮಾದರಿ ಮದುವೆಯೊಂದು ನಡೆದಿದೆ. ಒಂದೇ ಬಾರಿ ಒಂದೇ ಮನೆಗೆ 4 ವಧುಗಳ ಗೃಹ ಪ್ರವೇಶವಾಗಿದೆ. ನಾಲ್ವರು ಸಹೋದರರು ಒಂದೇ ಬಾರಿ ತಮ್ಮ ವಧುಗಳನ್ನು ಮನೆ ತುಂಬಿಸಿಕೊಂಡಿದ್ದಾರೆ. ಸ್ವಾಯಿಘಾಟಿ ಗ್ರಾಮದಲ್ಲಿ ಸಾಮೂಹಿಕ ವಿವಾಹ ಅನೇಕ ವರ್ಷಗಳಿಂದ ಜಾರಿಯಲ್ಲಿದೆ. ಆದ್ರೆ ಇದೇ ಮೊದಲ ಬಾರಿ ಒಂದೇ ಮನೆಯ ನಾಲ್ವರು ಸಹೋದರರು ಒಂದೇ ಬಾರಿ ವಿವಾಹವಾದ ಘಟನೆ ನಡೆದಿದೆ.

ಗ್ರಾಮದ ಪರಂಪರೆಯನ್ನು ಉಳಿಸಿದ ಸಹೋದರರ ತಾಯಿ ಮದುವೆಗೆ ಬರ್ತಿದ್ದ ಖರ್ಚನ್ನು ಉಳಿಸಿದ್ದಾರೆ. ಒಂದೇ ಬಾರಿ ನಾಲ್ವರು ಸೊಸೆಯರು ಮನೆಗೆ ಬಂದಿದ್ದು ಖುಷಿ ವಿಚಾರವೆಂದು ತಾಯಿ ಹೇಳಿದ್ದಾಳೆ. ಮದುವೆ ಪವಿತ್ರ ಬಂಧನ. ಅದು ಎಲ್ಲಿ ನೆರವೇರಿದೆ ಎಂಬುದು ದೊಡ್ಡ ಸಂಗತಿಯಲ್ಲವೆಂದು ತಾಯಿ ಹೇಳಿದ್ದಾಳೆ.

ನಾಲ್ವರು ಸೊಸೆಯರ ಮಧ್ಯೆ ಪ್ರೀತಿ, ಸಾಮರಸ್ಯ ಸದಾ ಇರಲಿ ಎಂಬುದು ಆಕೆಯ ಆಸೆಯಾಗಿದೆ. ಈ ಮದುವೆ ಗ್ರಾಮದ ಮಾದರಿ ಮದುವೆಗಳಲ್ಲಿ ಒಂದಾಗಿದೆ. ಗೃಹ ಪ್ರವೇಶದ ವೇಳೆ ಗ್ರಾಮದ ಜನರೆಲ್ಲ ಸೇರಿ ನವವಧುಗಳಿಗೆ ಆಶೀರ್ವಾದ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...