alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಬಾಲಕಿಯ ತಂದೆ ಬಿಚ್ಚಿಟ್ಟಿದ್ದಾರೆ ಮತ್ತಷ್ಟು ಕಟುಸತ್ಯ

ಡೆಂಘಿಯಿಂದ ಬಳಲುತ್ತಿದ್ದ 7 ವರ್ಷದ ಬಾಲಕಿ ಗುರ್ಗಾಂವ್ ನ ಫೋರ್ಟಿಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ಲು. ಬಾಲಕಿ ಸಾವಿನ ಬೆನ್ನಲ್ಲೇ ಆಸ್ಪತ್ರೆಯ ಒಂದೊಂದೇ ಅಕ್ರಮಗಳು ಬೆಳಕಿಗೆ ಬರ್ತಿವೆ. 15 ದಿನಗಳ ಕಾಲ ಬಾಲಕಿ ಆದ್ಯಾಳನ್ನು ಐಸಿಯುನಲ್ಲಿ ಇಡಲಾಗಿತ್ತು. ಫೋರ್ಟಿಸ್ ಆಸ್ಪತ್ರೆ ಆದ್ಯಾ ಹೆತ್ತವರಿಂದ 18 ಲಕ್ಷ ರೂಪಾಯಿ ಹಣ ಪಡೆದಿತ್ತು.

ಲಕ್ಷ ಲಕ್ಷ ಬಿಲ್ ಮಾಡಿದ್ರೂ ಮೃತ ಬಾಲಕಿಯನ್ನು ಸಾಗಿಸಲು ಆಂಬ್ಯುಲೆನ್ಸ್ ನೀಡಿರಲಿಲ್ಲ. ಆದ್ಯಾಳ ಸ್ಥಿತಿ ಕ್ಷಣಕ್ಷಣಕ್ಕೆ ಬಿಗಡಾಯಿಸುತ್ತಿದ್ರೂ ಫೋರ್ಟಿಸ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ರು ಅಂತಾ ಪೋಷಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಚಿಕಿತ್ಸೆ ಬಗ್ಗೆ ಯಾವ ಮಾಹಿತಿಯನ್ನೂ ತಮಗೆ ನೀಡುತ್ತಲೇ ಇರಲಿಲ್ಲ ಅಂತಾ ತಂದೆ ಜಯಂತ್ ಸಿಂಗ್ ಆರೋಪಿಸಿದ್ದಾರೆ.

ಆದ್ಯಾಳ ಬ್ರೈನ್ ಡೆಡ್ ಆಗಿರೋದು ಗೊತ್ತಿದ್ರೂ ಚಿಕಿತ್ಸೆ ಮುಂದುವರಿಸಿದ್ದರು ಅಂತಾ ಹೇಳಿದ್ದಾರೆ. ಜಯಂತ್ ಸಿಂಗ್ ಸಲಹೆ ಮೇರೆಗೆ ವೈದ್ಯರು ಎಂ ಆರ್ ಐ ಮಾಡಿದ್ದರಂತೆ. ಅಷ್ಟೊತ್ತಿಗಾಗ್ಲೇ ಆದ್ಯಾಳ ಮೆದುಳು ಶೇ.70-80 ರಷ್ಟು ಹಾನಿಗೊಳಗಾಗಿತ್ತು. ಆದ್ಯಾಳ ಸಾವಿನ ಕಾರಣವನ್ನು ಎರಡೂ ಆಸ್ಪತ್ರೆಗಳು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಿಲ್ಲ. ಡೆಂಘಿ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲ ಅಂತಾ ಆದ್ಯಾಳ ತಂದೆ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...