alex Certify
ಕನ್ನಡ ದುನಿಯಾ       Mobile App
       

Kannada Duniya

ಒಬಾಮಾರಿಗೆ “ಐ ಆಮ್ ಬ್ಲಾಕ್ ಬ್ಯೂಟಿ, ಐ ಲವ್ ಯೂ’’ ಎಂದ ಟ್ರಾನ್ಸ್ಜೆಂಡರ್

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸದಲ್ಲಿದ್ದಾರೆ. ದೆಹಲಿ ಟೌನ್ ಹಾಲ್ ನಲ್ಲಿ ಒಬಾಮಾ ದೇಶದ 300 ಯುವಜನತೆ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಯುವ ಜನತೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ರು. ಈ ವೇಳೆ ಟ್ರಾನ್ಸ್ಜೆಂಡರ್ ಕೇಳಿದ ಪ್ರಶ್ನೆಯೊಂದು ಎಲ್ಲರ ನಗುವಿಗೆ ಕಾರಣವಾಯ್ತು.

ಒಬಾಮಾ ಜೊತೆ ಟೌನ್ ಹಾಲ್ ನಲ್ಲಿದ್ದ ಟ್ರಾನ್ಸ್ಜೆಂಡರ್ ಪದ್ಮಶಾಲಿ ಮಿಸ್ಟರ್ ಒಬಾಮಾ, ಐ ಆ್ಯಮ್ ಬ್ಲಾಕ್ ಬ್ಯೂಟಿ. ಐ ಲವ್ ಯೂ ಎಂದಿದ್ದಾರೆ. ಇದನ್ನು ಕೇಳಿದ ಒಬಾಮಾ ಜೊತೆ ಟೌನ್ ಹಾಲ್ ನಲ್ಲಿದ್ದ ಎಲ್ಲರ ಮುಖದಲ್ಲೂ ನಗು ಮೂಡಿದೆ. ತಾನೊಬ್ಬ ಲೈಂಗಿಕ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡ ಪದ್ಮಶಾಲಿ, ನಾನು ತುಂಬ ಬಡತನದಲ್ಲಿದ್ದೇನೆ. ಎನ್ ಜಿಓ ಒಂದು ನಾನು ಇಲ್ಲಿಗೆ ಬರಲು ನೆರವಾಗಿದೆ ಎಂದ್ರು. ಟ್ರಾನ್ಸ್ಜೆಂಡರ್ ಮೇಲೆ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ಎಲ್ಲೆಡೆ ತಾರತಮ್ಯ ಮಾಡಲಾಗ್ತಿದೆ. ನಾವು ಕೂಡ ಈ ಸಮಾಜದ ಒಂದು ಭಾಗ. ತಾರತಮ್ಯ ತಡೆಯೋದು ಹೇಗೆ ಎಂದು ಒಬಾಮಾರಿಗೆ ಪದ್ಮಶಾಲಿ ಪ್ರಶ್ನೆ ಮಾಡಿದ್ದಾರೆ.

ಟ್ರಾನ್ಸ್ಜೆಂಡರ್ ಪ್ರೊಟೆಕ್ಷನ್ ಬಿಲ್ ಬಗ್ಗೆಯೂ ಒಬಾಮಾರನ್ನು ಪ್ರಶ್ನಿಸಿದ್ದಾರೆ. ಪ್ರಶ್ನೋತ್ತರ ಮುಗಿಯುತ್ತಿದ್ದಂತೆ ನಾನು ನಿಮ್ಮನ್ನು ಒಮ್ಮೆ ತಬ್ಬಿಕೊಳ್ಳಲ ಎಂದು ಕೇಳಿದ್ದಾರೆ. ಇದಕ್ಕೆ ಒಬಾಮಾ ನಕ್ಕಿದ್ದಲ್ಲದೆ ಕಾರ್ಯಕ್ರಮ ಮುಗಿಯಲಿ ಎಂದಿದ್ದಾರೆ.

ಇದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒಬಾಮಾ ಭೇಟಿಯಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...