alex Certify
ಕನ್ನಡ ದುನಿಯಾ       Mobile App
       

Kannada Duniya

ತಹಶೀಲ್ದಾರ್ ಮೇಲೆಯೇ ಕೈ ಮಾಡಿದ ಮಾಜಿ ಶಾಸಕ

ತಹಶೀಲ್ದಾರ್ ಕಚೇರಿಗೆ ನುಗ್ಗಿ ಅವರಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಮಾಜಿ ಶಾಸಕ ದಿಲೀಪ್ ವರ್ಮಾ ಮೇಲೆ ಎರಡು ಕೇಸುಗಳು ದಾಖಲಾಗಿವೆ.

ಆರೋಪಿ ದಿಲೀಪ್ ವರ್ಮಾ ಬಹ್ರೈಚ್‌ನ ನನ್‌ಪಾರಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿ ಮಾಧುರಿ ವರ್ಮಾ ಅವರ ಪತಿ. ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ದಿಲೀಪ್ ವರ್ಮಾ ತಹಸೀಲ್ದಾರ್ ಕಚೇರಿಯ ಗೇಟಿಗೆ ಬೀಗ ಜಡಿದು ಕೆಲಸಕ್ಕೆ ಬಾರದಂತೆ ತಡೆದಿದ್ದರು.

ದಿಲೀಪ್ ವರ್ಮಾ ಹಾಗೂ 20-25 ಜನರ ಗುಂಪು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿತು ಹಾಗೂ ನಿಂದಿಸುತ್ತಾ ಹಲ್ಲೆ ನಡೆಸಿತು ಎಂದು ತಹಶೀಲ್ದಾರ್ ಮಧುಸೂದನ್ ಆರ್ಯ ಅವರು ಪೊಲೀಸರಿಗೆ ದೂರು ನೀಡಿದ್ದರು. ದಿಲೀಪ್ ವರ್ಮಾ ಹಾಗೂ ಬೆಂಬಲಿಗರು ರಸ್ತೆ ತಡೆ ನಡೆಸಿ ಪೊಲೀಸರೊಂದಿಗೂ ಅನುಚಿತವಾಗಿ ವರ್ತಿಸಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...