alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ವಾಹನದಲ್ಲೇ ಲಾಕ್ ಆಗಿದ್ದ 6 ವರ್ಷದ ಬಾಲಕ

ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಶಾಲಾ ವಾಹನದಲ್ಲಿ ಕೆಲವು ಗಂಟೆಗಳ ವರೆಗೆ ಲಾಕ್ ಆಗಿದ್ದರಿಂದ ಅಸ್ವಸ್ಥನಾಗಿದ್ದ ಬಾಲಕ ಕೊನೆಯುಸಿರೆಳೆದಿದ್ದಾನೆ. 6 ವರ್ಷದ ಬಾಲಕ ನೈತಿಕ್ ಗೌರ್, ಸಾಯಿ ಇಂಟರ್ ನ್ಯಾಶನಲ್ ಸ್ಕೂಲ್ ನ ವಿದ್ಯಾರ್ಥಿ.

ಶಾಲಾ ವಾಹನದಲ್ಲೇ ನೈತಿಕ್ ಸ್ಕೂಲ್ ಗೆ ಬರುತ್ತಿದ್ದ. ಆದ್ರೆ ಮಾರ್ಚ್ 20ರಂದು ಶಾಲೆಯ ಸಿಬ್ಬಂದಿ ವಾಹನದಿಂದ ಇಳಿಸಿಕೊಂಡು ಬಾಲಕನನ್ನು ಕರೆದೊಯ್ದಿಲ್ಲ. ಮರೆತು ಅಲ್ಲೇ ಬಿಟ್ಟಿದ್ದಾನೆ, ನಂತರ ಚಾಲಕ ಕಾರ್ ಲಾಕ್ ಮಾಡಿಕೊಂಡು ಹೋಗಿಬಿಟ್ಟಿದ್ದಾನೆ.

ಇದು ಶಾಲಾ ಸಿಬ್ಬಂದಿಯ ಗಮನಕ್ಕೆ ಬರುವಷ್ಟರಲ್ಲಿ ಕಾರ್ ನಲ್ಲಿ ಲಾಕ್ ಆಗಿದ್ದ ನೈತಿಕ್ ಸಂಪೂರ್ಣ ಅಸ್ವಸ್ಥಗೊಂಡಿದ್ದ. ಉಸಿರಾಡಲು ಸಾಧ್ಯವಾಗದೇ ಪ್ರಜ್ಞೆತಪ್ಪಿ ಬಿದ್ದಿದ್ದ. ಆತನನ್ನು ಭೋಪಾಲ್ ನ ರೇಂಬೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಮಗನ ಸಾವಿಗೆ ಕಾರಣವಾದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನೈತಿಕ್ ತಂದೆ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...