alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯೊಳಗೆ ಮೊಸಳೆ ಕಂಡು ಬೆಚ್ಚಿ ಬಿದ್ರು

mosle-hridwar

ಹರಿದ್ವಾರ: ಉತ್ತರಾಖಂಡ್ ನಲ್ಲಿ ಭಾರೀ ಮಳೆಯಾಗಿ ಪ್ರವಾಹ ಉಂಟಾಗಿದ್ದು, ಹರಿದ್ವಾರದ ಅಲ್ವಾಲ್ ಪುರ ಗ್ರಾಮದ ಮನೆಯೊಂದರಲ್ಲಿ ಮೊಸಳೆ ಕಾಣಿಸಿಕೊಂಡಿದೆ.

ಪ್ರವಾಹದಿಂದ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದ ನೀರಿನಲ್ಲಿ ಬಂದ 10 ಅಡಿ ಉದ್ದದ ಮೊಸಳೆ ನರೇಂದ್ರ ಕುಮಾರ್ ಅವರ ಮನೆಯೊಳಗೆ ಸೇರಿಕೊಂಡಿದೆ.

ರಾತ್ರಿ ಮೊಸಳೆ ಬಂದಿದ್ದರಿಂದ ಮನೆಯವರೆಲ್ಲಾ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಗ್ರಾಮಸ್ಥರ ನೆರವಿನಿಂದ ಮೊಸಳೆಯನ್ನು ಮನೆಯಿಂದ ಹೊರಗೆ ತಂದಿದ್ದಾರೆ.

4 ಗಂಟೆಗಳ ಕಾರ್ಯಾಚರಣೆ ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಲಾಗಿದೆ. ಪ್ರವಾಹದಿಂದಾಗಿ ಮೊಸಳೆ, ಹಾವು ಮೊದಲಾದವು ಗ್ರಾಮದೊಳಗೆ ಕಾಣಿಸಿಕೊಂಡಿರುವುದು ಜನರ ಆತಂಕವನ್ನು ಹೆಚ್ಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...