alex Certify
ಕನ್ನಡ ದುನಿಯಾ       Mobile App
       

Kannada Duniya

13 ಅಡಿ ಉದ್ದದ ಕಿಂಗ್ ಕೋಬ್ರಾ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಕಿಂಗ್ ಕೋಬ್ರಾ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ಅತಿ ದೊಡ್ಡ ಕಿಂಗ್ ಕೋಬ್ರಾ ಎಂದು ಕರೆಯಲಾಗ್ತಿದೆ. ಬೃಹತ್ ಗಾತ್ರದ  ಕಿಂಗ್ ಕೋಬ್ರಾ ಮಹಾರಾಷ್ಟ್ರ ಗಡಿಯ ಸಾವಂತವಾಡಿ, ಬೆಳಗಾವಿ ಅರಣ್ಯದಲ್ಲಿ ಸಿಕ್ಕಿದೆ ಎನ್ನಲಾಗ್ತಿದೆ.

ಕಿಂಗ್ ಕೋಬ್ರಾ ಹಿಡಿದಿರುವ ವಿಡಿಯೋ ಹಾಗೂ ಫೋಟೋ ಕೂಡ ಬಹಿರಂಗವಾಗಿದೆ. ಕಿಂಗ್ ಕೋಬ್ರಾ ವಿರೋಧ ವ್ಯಕ್ತಪಡಿಸುತ್ತಿದ್ದರೆ ಅದನ್ನು ಸಂಭಾಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡ್ತಿದ್ದಾರೆ. ಸಿಬ್ಬಂದಿ ಹಾವಿನ ಬಾಲವನ್ನು ಹಿಡಿದಿದ್ದಾನೆ. ಅದು ಆ ಕಡೆ ಈ ಕಡೆ ದಾಳಿಗೆ ಮುಂದಾಗ್ತಿದೆ.

ಸತತ ಪ್ರಯತ್ನದ ನಂತ್ರ ಅರಣ್ಯ ಇಲಾಖೆ ಸಿಬ್ಬಂದಿ ಕಿಂಗ್ ಕೋಬ್ರಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ಈ ಕೋಬ್ರಾ 13 ಅಡಿ ಉದ್ದವಿದೆ ಎಂದು ಅಂದಾಜಿಸಲಾಗಿದೆ. ವೈರಲ್ ಆಗಿರುವ ವಿಡಿಯೋ ನೋಡಿ ಕೆಲವರು ಆಶ್ಚರ್ಯಪಟ್ಟರೆ ಮತ್ತೆ ಕೆಲವರು ಇದು ನಕಲಿ ಎನ್ನುತ್ತಿದ್ದಾರೆ. ಫೋಟೋ ಶಾಪ್ ಮೂಲಕ ನಕಲಿ ಫೋಟೋ ತಯಾರಿಸಲಾಗಿದೆ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...