alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ಷ್ಮಿ ಮಂದಿರದಲ್ಲಿತ್ತು ವಿದೇಶಿ ಪ್ರವಾಸಿಗನ ಸಾವು

ಟಿಕಾಮ್ಗಾರ್ ಪ್ರವಾಸಿ ಸ್ಥಳ ಓರ್ಚಾದಲ್ಲೊಂದು ದುರ್ಘಟನೆ ನಡೆದಿದೆ. ವಿದೇಶಿ ಪ್ರವಾಸಿಯೊಬ್ಬ ಸೆಲ್ಫಿ ತೆಗೆಯುವ ವೇಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇಂಗ್ಲೆಂಡ್ ನಿಂದ ಬಂದಿದ್ದ ರೋಗರ್ ಜೇಮ್ಸ್ ಪುರಾತನ ಲಕ್ಷ್ಮಿ ದೇವಸ್ಥಾನದ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರೋಗರ್ ಸಾವನ್ನಪ್ಪಿದ್ದಾನೆ.

ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಂಗ್ಲೆಂಡ್ ನ 59 ವರ್ಷದ ರೋಗರ್ ಹಾಗೂ ಆತನ ಪತ್ನಿ ಹೆಲ್ರಿ ಲಕ್ಷ್ಮಿ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ. ಎರಡನೇ ಮಹಡಿಯಲ್ಲಿ ಫೋಟೋ ತೆಗೆಯುತ್ತಿದ್ದ ರೋಗರ್ ಛಾವಣೆ ಮೇಲೇರಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಕಾಲು ಜಾರಿ 30 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ.

ತಕ್ಷಣ ಆ್ಯಂಬುಲೆನ್ಸ್ ಮೂಲಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು. ರೋಗರ್ ಗಂಭೀರವಾಗಿ ಗಾಯಗೊಂಡಿದ್ದರಿಂದ ಆತನನ್ನು ಝಾನ್ಸಿಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ರು. ಝಾನ್ಸಿಯ ರಾಮರಾಜಾ ಆಸ್ಪತ್ರೆ ಐಸಿಯುವಿಗೆ ದಾಖಲಾಗಿದ್ದ ರೋಗರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...