alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿ ಮೇಲೆ ನಡೆದ ಅತ್ಯಾಚಾರವನ್ನು ಕಣ್ಣಾರೆ ಕಂಡ ಯುವಕ ಸಾವಿಗೆ ಶರಣು

ರಾಯಪುರ: ಸ್ನೇಹಿತೆ ಮೇಲೆ ಇಬ್ಬರು‌ ಕಾಮುಕರು ಅತ್ಯಾಚಾರ ಎಸಗಿದ್ದನ್ನು ಕಣ್ಣಾರೆ ನೋಡಿದ 19 ವರ್ಷದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತೀಸ್ ಘಡದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

ಕೊರ್ಬಾ ಜಿಲ್ಲೆಯ ಕಟ್ಗೋರಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸೆ.1 ರಂದು ಈಶ್ವರ್ ದಾಸ್ ಹಾಗೂ ಕನ್ವಾರ್ ಎಂಬುವರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು. ಇದನ್ನು ನೋಡಿದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ದೂರು ನೀಡಿರುವ ಸಂತ್ರಸ್ಥೆ, ಮನೆಗೆ ಹೋಗುತ್ತಿರುವಾಗ ಆತ ಜತೆಗೆ ಬಂದಿದ್ದ, ಆದರೆ ನಿರ್ಜನ ಪ್ರದೇಶದಲ್ಲಿ‌ ದಾಸ್ ಹಾಗೂ ಕನ್ವಾರ್ ನಮ್ಮ ಮೇಲೆ ಎರಗಿದರು. ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡ ಕಾಮುಕರು, ನನ್ನ ಮೇಲೆ‌ ಅತ್ಯಾಚಾರ ಎಸಗಿದರು. ಹಲ್ಲೆಗೊಳಗಾಗಿದ್ದ ಯುವಕನ ಮುಂದೆ ಅತ್ಯಾಚಾರ ನಡೆಯುತ್ತಿದ್ದರೂ ಆತ ಅಸಹಾಯಕ ಸ್ಥಿತಿಯಲ್ಲಿದ್ದ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...