alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆಯಲ್ಲಿ ನರಳಿದವಳಿಗೀಗ ಭಿಕ್ಷುಕ ಸಂಗಾತಿ

love

ಜೀವನ ಅನ್ನೋದು ಸವಾಲುಗಳ ಸಂತೆ. ಅವನ್ನೆಲ್ಲ ದಿಟ್ಟವಾಗಿ ಎದುರಿಸಿದ್ರೆ ಮಾತ್ರ ಬದುಕಲು ಸಾಧ್ಯ. ಆದ್ರೆ ಕಷ್ಟದ ಸಮಯದಲ್ಲಿ ನಮಗೆ ಹೆಗಲಾಗಿ ಯಾರಾದ್ರೂ ಜೊತೆಗಿದ್ರೆ ಎಲ್ಲವನ್ನೂ ಧೈರ್ಯದಿಂದ ಎದುರಿಸಬಹುದು. ಇಂಥದ್ದೇ ನೈಜ ಬದುಕಿನ ಘಟನೆಯೊಂದು ಇಂಟರ್ನೆಟ್ ನಲ್ಲಿ ಎಲ್ಲರ ಮನಗೆದ್ದಿದೆ.

ಮಾಜಿ ಸೆಕ್ಸ್ ವರ್ಕರ್ ಒಬ್ಬಳಿಗೆ ವಿಕಲ ಚೇತನ ಭಿಕ್ಷುಕನಲ್ಲಿ ಪ್ರೇಮಾಂಕುರವಾಗಿದೆ. ರಜಿಯಾ ಬೇಗಂ ಚಿಕ್ಕ ವಯಸ್ಸಿನಲ್ಲೇ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದಳು. ಮಗಳ ಭವಿಷ್ಯಕ್ಕಾಗಿ ಆ ವೃತ್ತಿಯನ್ನು ಬಿಟ್ಟು ಓಡಿ ಬರಲು ಅವಳಿಂದ ಸಾಧ್ಯವಾಗಲೇ ಇಲ್ಲ. ಇಂತಹ ನರಕಕ್ಕೆ ದೂಡಿದ ಸಮಾಜದಲ್ಲಿ ಆಕೆ ಅಕ್ಷರಶಃ ಅಸಹಾಯಕಳಾಗಿದ್ದಳು.

ಆ ಸಮಯದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಆಕೆಗೆ ಸಹಾಯ ಮಾಡಿದವನು ಅಬ್ಬಾಸ್ ಮಿಯಾ. ಆತ ವಿಕಲಚೇತನ ಭಿಕ್ಷುಕ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅವಳಿಗೆ ಹಣ ಸಹಾಯ ಮಾಡಿದ್ದ. ಆತ ವಿಕಲಾಂಗ ಅನ್ನೋ ಕಾರಣಕ್ಕೆ ಪತ್ನಿ ಬಿಟ್ಟು ಹೋಗಿದ್ದಳು. ಇಬ್ಬರದ್ದೂ ನೋವಿನ ಬದುಕು.

ಹಾಗಾಗಿ ರಜಿಯಾ ಆತನಿಗೆ ಜೊತೆಯಾಗಲು ನಿರ್ಧರಿಸಿದ್ದಾಳೆ. ಜೀವನದುದ್ದಕ್ಕೂ ಅವನ ಬದುಕಿನ ಬಂಡಿಯಾಗಿರೋ ವ್ಹೀಲ್ ಚೇರ್ ಅನ್ನು ತಳ್ಳಲು ತೀರ್ಮಾನಿಸಿದ್ದಾಳೆ. ನಾಲ್ಕು ವರ್ಷಗಳ ಹಿಂದೆಯೇ ಇಬ್ಬರೂ ಮದುವೆ ಮಾಡಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯನ್ನು ಜಿಎಂಬಿ ಆಕಾಶ್ ಎಂಬುವವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...