alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನಕ್ಕಿಂತಲೂ ಭ್ರಷ್ಟ ದೇಶ ಭಾರತ..!

ಭಾರತ ಭ್ರಷ್ಟಾಚಾರ ವಿಚಾರದಲ್ಲಿ ನೆರೆ ರಾಷ್ಟ್ರ ಪಾಕ್ ಗಿಂತ ಮುಂದಿದೆ. ಏಷ್ಯಾ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಫೋರ್ಬ್ಸ್ ವರದಿ ಪ್ರಕಾರ ಲಂಚ ವಿಚಾರದಲ್ಲಿ ಭಾರತ, ವಿಯಟ್ನಾಂ, ಪಾಕಿಸ್ತಾನ ಹಾಗೂ ಮ್ಯಾನ್ಮಾರನ್ನು ಹಿಂದಿಕ್ಕಿದೆ. ಭಾರತದಲ್ಲಿ ಲಂಚ ಶೇಕಡಾ 69ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಫೋರ್ಬ್ಸ್ ಈ ವರದಿ ಮಾರ್ಚ್ 2017 ರದ್ದಾಗಿದೆ. ಇದ್ರಲ್ಲಿ  ಭಾರತವನ್ನು ಅತ್ಯಂತ ಭ್ರಷ್ಟ ದೇಶವೆಂದು ಹೇಳಲಾಗಿದೆ. ಪಾಕಿಸ್ತಾನ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ವಿಯೆಟ್ನಾಂ ಇದ್ದು ಮೂರನೇ ಸ್ಥಾನದಲ್ಲಿ ಥೈಲ್ಯಾಂಡ್ ಹಾಗೂ ಐದನೇ ಸ್ಥಾನದಲ್ಲಿ ಮ್ಯಾನ್ಮಾರ್ ಇದೆ.

ವಿಯೆಟ್ನಾಂನಲ್ಲಿ ಶೇಕಡಾ 65ರಷ್ಟು ಲಂಚಾವತಾರ ತಾಂಡವವಾಡ್ತಿದೆ. ಥೈಲ್ಯಾಂಡ್ ನಲ್ಲಿ ಶೇಕಡಾ 41ರಷ್ಟಿದ್ದರೆ ಮ್ಯಾನ್ಮಾರ್ನಲ್ಲಿ ಶೇಕಡಾ 40ರಷ್ಟು ಭ್ರಷ್ಟಾಚಾರವಿದೆ. ಫೋರ್ಬ್ಸ್ 18 ತಿಂಗಳ ಕಾಲ ನಡೆಸಿದ ಸುದೀರ್ಘ ಸಮೀಕ್ಷೆಯಲ್ಲಿ ಈ ವಿಷ್ಯ ಹೊರಬಿದ್ದಿದೆ.

ಶಾಲೆ, ಆಸ್ಪತ್ರೆ, ಪೊಲೀಸ್, ಗುರುತಿನ ಕಾರ್ಡ್, ಸಾರ್ವಜನಿಕ ಸೌಲಭ್ಯ ನೀಡುವ ಸ್ಥಳಗಳಲ್ಲಿ ಭ್ರಷ್ಟಾಚಾರ ಹೆಚ್ಚಿನ ಪ್ರಮಾಣದಲ್ಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರು ಈ ಸ್ಥಳಗಳಲ್ಲಿ ಲಂಚ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...