alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ಹೊಂದಿದ್ದವರಿಗೆ ಮಾತ್ರ ಸಿಗುತ್ತೇ ಗನ್ ಲೈಸೆನ್ಸ್

gun_645ಭಾರತವನ್ನು ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರ, ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಬಯಸುವವರು ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕೆಂದು ಈ ಹಿಂದೆ ನಿಯಮ ಮಾಡಲಾಗಿದ್ದು, ಈಗ ಮಧ್ಯ ಪ್ರದೇಶದ ಜಿಲ್ಲೆಯೊಂದರಲ್ಲಿ ಮತ್ತೊಂದು ನಿಯಮ ಜಾರಿಗೆ ತರಲಾಗಿದೆ.

ಮಧ್ಯ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಗನ್ ಹೊಂದುವುದು ಪ್ರತಿಷ್ಟೆಯ ಪ್ರಶ್ನೆಯಾಗಿದ್ದು, ಪ್ರತಿ ವರ್ಷವೂ ಸಹಸ್ರಾರು ಮಂದಿ ಗನ್ ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿವಾಹ ಸಮಾರಂಭಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದು ಇಲ್ಲಿನ ಜನರ ಸಂಪ್ರದಾಯವಾಗಿದೆ.

ಮಧ್ಯ ಪ್ರದೇಶದ ರಾಜ್ ಘರ್ ಜಿಲ್ಲೆಯಲ್ಲಿ ಈಗ ಹೊಸ ನಿಯಮವೊಂದನ್ನು ಜಾರಿ ಮಾಡಲಾಗಿದ್ದು, ಗನ್ ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸುವ ವೇಳೆ ತಮ್ಮ ಮನೆಯಲ್ಲಿ ಶೌಚಾಲಯವಿರುವುದರ ಕುರಿತು ದಾಖಲೆ ನೀಡಬೇಕಿದೆ. ಅಲ್ಲದೇ ಪ್ರಮಾಣ ಪತ್ರವನ್ನೂ ಮಾಡಿಸಬೇಕಾಗುತ್ತದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕವಷ್ಟೇ ಗನ್ ಲೈಸೆನ್ಸ್ ನೀಡಲಾಗುತ್ತದೆ. ಈ ನಿಯಮ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ರಾಜ್ ಘರ್ ಜಿಲ್ಲೆಯಲ್ಲಿ ಪ್ರತಿ ವರ್ಷ 700 ಕ್ಕೂ ಅಧಿಕ ಮಂದಿ ಗನ್ ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸುತ್ತಾರೆ. ಗನ್ ಗಾಗಿ 50 ಸಾವಿರ ರೂ. ವ್ಯಯಿಸುವವರು ಕೆಲ ಸಾವಿರ ಖರ್ಚು ಮಾಡಿ ಶೌಚಾಲಯ ಕಟ್ಟಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಈ ನಿಯಮ ಜಾರಿಗೊಳಿಸಲಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...