alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಕೇರ್ ಗೆ ಕಡ್ಡಾಯವಲ್ಲ ಆಧಾರ್

ನ್ಯಾಷನಲ್ ಹೆಲ್ತ್ ಪ್ರೊಡೆಕ್ಷನ್ ಸ್ಕೀಮ್ ಅಡಿಯಲ್ಲಿ ಸರ್ಕಾರದ ಯೋಜನೆ ಲಾಭ ಪಡೆಯಲು ಆಧಾರ್ ಗುರುತಿನ ಚೀಟಿ ಕಡ್ಡಾಯವಿಲ್ಲ. ಮೋದಿ ಕೇರ್ ಲಾಭ ಪಡೆಯಲು ಫಲಾನುಭವಿಗಳ ಬಳಿ ಕೇವಲ ರೇಷನ್ ಕಾರ್ಡ್ ಇರಬೇಕೆಂದು ಮೂಲಗಳು ಹೇಳಿವೆ.

ರೇಷನ್ ಕಾರ್ಡ್ ಅಲ್ಲದೆ ಚಾಲನಾ ಪರವಾನಿಗೆ ಸೇರಿದಂತೆ ಸರ್ಕಾರ ಶಿಫಾರಸ್ಸು ಮಾಡುವ ಯಾವುದೇ ಗುರುತಿನ ಚೀಟಿಯನ್ನು ಈ ಯೋಜನೆಗೆ ಮಾನ್ಯ ಮಾಡಲಾಗುವುದು. ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಅಡಿಯಲ್ಲಿ, ಬಡವರಿಗೆ ಆರೋಗ್ಯ ವಿಮೆ ನೀಡಲಾಗುತ್ತದೆ.

ಆಧಾರ್ ಕಾರ್ಡ್ ವಿರುದ್ಧ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್ ನಲ್ಲಿವೆ. ಇದೇ ಕಾರಣಕ್ಕೆ ಮೋದಿ ಕೇರ್ ಯೋಜನೆಗೆ ಆಧಾರ್ ಕಡ್ಡಾಯ ಮಾಡಿಲ್ಲವೆಂದು ಅಧಿಕಾರಿ ಮೂಲಗಳು ಹೇಳಿವೆ. ಆಧಾರ್ ಕಾರ್ಡ್ ಗೌಪ್ಯತೆಗೆ ಧಕ್ಕೆ ತರುತ್ತದೆ ಎಂದು ಕೆಲವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರ ಈಗಾಗಲೇ ಎನ್ಎಚ್ಪಿಎಸ್ ಗಾಗಿ ಮಾಹಿತಿ ಸಂಗ್ರಹಿಸುವ ಕಾರ್ಯ ಶುರು ಮಾಡಿದೆ. ಈ ಯೋಜನೆಯಲ್ಲಿ ಬಡವರಿಗೆ ವರ್ಷಕ್ಕೆ 5 ಲಕ್ಷದವರೆಗೆ ಆರೋಗ್ಯ ವಿಮೆ ಸಿಗಲಿದೆ. ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ ಆಧರಿಸಿ ಯೋಜನೆ ಲಾಭವನ್ನು ಸರ್ಕಾರ ಬಡವರಿಗೆ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...