alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಗಾಗಿ ಕುಟುಂಬಸ್ಥರ ಜೀವದ ಜೊತೆ ಆಟವಾಡಿದ ಅಪ್ರಾಪ್ತೆ

download

ಪ್ರೀತಿಯ ಗುಂಗಿನಲ್ಲಿ ಹುಡುಗಿಯೊಬ್ಬಳು ತನ್ನ ಇಡೀ ಕುಟುಂಬವನ್ನೇ ಸರ್ವನಾಶ ಮಾಡುವ ನಿರ್ಧಾರ ಕೈಗೊಂಡಿದ್ದಾಳೆ. ಪ್ರೇಮಿ ಜೊತೆ ಸೇರಿಕೊಂಡು ಮನೆಯ ಐದು ಮಂದಿಗೆ ವಿಷ ಕುಡಿಸಿದ್ದಾಳೆ.

ಉತ್ತರಖಂಡ್ ನ ಜಸ್ಪುರದಲ್ಲಿ ಘಟನೆ ನಡೆದಿದೆ. ಪೆಪ್ಸಿಗೆ ಕೀಟನಾಶಕ ಬೆರೆಸಿ ಕುಟುಂಬ ಸದಸ್ಯರಿಗೆ ನೀಡಿದ್ದಾಳೆ ಹುಡುಗಿ. 17 ವರ್ಷದ ಕಾಮಿನಿ ಹಾಗೂ 22 ವರ್ಷದ ಮನೀಶ್ ಪ್ರೀತಿ ಮಾಡ್ತಿದ್ದರು. ಎಲ್ಲರಿಗೂ ವಿಷ ನೀಡಿ ಓಡಿ ಹೋಗುವ ಪ್ಲಾನ್ ಮಾಡಿದ್ದರು ಪ್ರೇಮಿಗಳು. ಆದ್ರೆ ಪ್ಲಾನ್ ಕೈಕೊಟ್ಟಿದೆ.

ಮನೆಯಲ್ಲಿ ಪೆಪ್ಸಿ ಕುಡಿದು ಒದ್ದಾಡುತ್ತಿದ್ದ ಕಾಮಿನಿ ಕುಟುಂಬಸ್ಥರನ್ನು ನೋಡಿದ ಆಸುಪಾಸಿನವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರ ಹೇಳಿಕೆ ಮೇರೆಗೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಜ್ಜಿ, ಅಪ್ಪ, ತಮ್ಮ, ತಂಗಿಗೆ ವಿಷ ನೀಡಿದ್ದಾಳೆ ಕಾಮಿನಿ. ಸದ್ಯ ಎಲ್ಲರೂ ಚೇತರಿಸಿಕೊಳ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...