alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರತ್ ನಲ್ಲಿ ‘ಶೋಲೆ’ ಭೀತಿ, ಡಕಾಯಿತರು ಅರೆಸ್ಟ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ರು. ಅದನ್ನೇ ಥೀಮ್ ಆಗಿಟ್ಟುಕೊಂಡು ಗುಜರಾತ್ ನ ಸೂರತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದಾರೆ.

ಗಬ್ಬರ್ ಸಿಂಗ್, ಕಾಲಿಯಾ, ಸಾಂಬಾ, ಠಾಕೂರ್ ಹೀಗೆ ಶೋಲೆ ಚಿತ್ರದ ಪಾತ್ರಧಾರಿಗಳ ವೇಷ ಧರಿಸಿ ಕೈ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗಬ್ಬರ್ ಸಿಂಗ್ ವೇಷಧಾರಿಯಂತೂ ಕುದುರೆ ಏರಿ ಕೈಯಲ್ಲಿ ನಕಲಿ ಗನ್ ಹಿಡಿದಿದ್ದ.

ನಕಲಿ ಗನ್ ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿದ ಆರೋಪದ ಮೇಲೆ ಪುರಸಭೆ ಕೌನ್ಸಿಲರ್ ಅಸ್ಲಂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೆರವಣಿಗೆಗೆ ಪೊಲೀಸರಿಂದ ಅನುಮತಿಯನ್ನು ಕೂಡ ಪಡೆದಿರಲಿಲ್ಲ.

ಆದ್ರೆ ಗಬ್ಬರ್ ಸಿಂಗ್ ವೇಷ ಧರಿಸಿದ್ದ ಕಾರ್ಯಕರ್ತ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಕುದುರೆ ಸಮೇತ ಪರಾರಿಯಾಗಿದ್ದಾನೆ. ಗಬ್ಬರ್ ಸಿಂಗ್ ಅವತಾರಕ್ಕಾಗಿ ಬಟ್ಟೆ, ನಕಲಿ ಶಸ್ತ್ರಾಸ್ತ್ರ, ಕುದುರೆ ಎಲ್ಲವನ್ನೂ ಆತ ಬಾಡಿಗೆಗೆ ತಂದಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...