alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ಭೇಟಿಗಾಗಿ ಅಧಿಕಾರಿಗಳು ಮಾಡಿದ್ದೇನು?

yogi

ಉತ್ತರಪ್ರದೇಶದ ಖುಷಿನಗರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎನ್ಸೆಫಾಲಿಟಿಸ್ ರೋಗದ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಸಿಎಂ ಯೋಗಿ ಅವರನ್ನು ಭೇಟಿ ಮಾಡಲು ಅಲ್ಲಿನ ದಲಿತರು ಸಾಬೂನು ಮತ್ತು ಶಾಂಪೂ ಬಳಸಿ ಸ್ವಚ್ಛವಾಗಿ ಸ್ನಾನ ಮಾಡುವಂತೆ ಸೂಚಿಸಲಾಗಿದೆಯಂತೆ, ಅಷ್ಟೇ ಅಲ್ಲ ಸ್ನಾನದ ನಂತರ ಪರ್ಫ್ಯೂಮ್ ಸ್ಪ್ರೇ ಮಾಡಿಕೊಂಡ ಬಳಿಕ ಸಿಎಂ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗ್ತಾ ಇದೆ.

ಮುಸಾಹರ್ ಸಮುದಾಯದ ಜನರನ್ನು ಯೋಗಿ ಭೇಟಿ ಮಾಡಿದ್ದಾರೆ. ಇಲಿ ಹಿಡಿಯುವವರೆಂದೇ ಈ ಸಮುದಾಯದವರನ್ನು ಗುರುತಿಸಲಾಗುತ್ತದೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ರಸ್ತೆ ಮಾಡಲಾಯ್ತು.

ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಯ್ತು, ಶೌಚಾಲಯಗಳನ್ನು ಕಟ್ಟಿಸಲಾಯ್ತು. ಅಧಿಕಾರಿಗಳು ಸಾಬೂನು, ಶಾಂಪೂ ಹಾಗೂ ಹೊಸಬಟ್ಟೆಗಳನ್ನು ಕೂಡ ದಲಿತರಿಗೆ ವಿತರಿಸಿದ್ದಾರಂತೆ.

ಕೆಲದಿನಗಳ ಹಿಂದಷ್ಟೆ ಹುತಾತ್ಮ ಬಿಎಸ್ಎಫ್ ಯೋಧ ಪ್ರೇಮ್ ಸಾಗರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಲು ಸಿಎಂ ಯೋಗಿ ತೆರಳಿದ್ರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಸೈನಿಕನ ಮನೆಗೆ ಕಾರ್ಪೆಟ್, ಸೋಫಾ, ಟವೆಲ್ ಗಳನ್ನೆಲ್ಲ ತಂದಿದ್ರು. ಸಿಎಂ ಅಲ್ಲಿಂದ ಹೊರಡುತ್ತಿದ್ದಂತೆ, ಅದೆಲ್ಲವನ್ನೂ ವಾಪಸ್ ಕೊಂಡೊಯ್ದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...