alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ರೂಪಾಯಿ ಬಾಕಿ ಉಳಿಸಿಕೊಂಡಿದ್ದಕ್ಕೆ ಆಗಿದ್ದೇನು…?

ಚಿನ್ನವನ್ನ ಅಡವಿಟ್ಟು ಸಾಲ ತೆಗೆದುಕೊಂಡ ಪ್ರಕರಣ ಒಂದು ಈಗ ಚೆನ್ನೈ ನ್ಯಾಯಾಲಯದವರೆಗೂ ಬೆಳೆದು ನಿಂತಿದೆ. ಒಂದು ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ ಅನ್ನೋ ಆರೋಪದ ಮೇಲೆ ಕೋ ಆಪರೇಟಿವ್ ಬ್ಯಾಂಕ್ ಒಂದು ಚಿನ್ನವನ್ನ ವಾಪಸ್ಸು ಕೊಡದೆ ಸತಾಯಿಸುತ್ತಿದೆ.

ಚೆನ್ನೈನ ಸಿ. ಕುಮಾರ್ ಎಂಬ ವ್ಯಕ್ತಿಯೇ ಚಿನ್ನವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕ. ಕುಮಾರ್ ಅವರು ಚೆನ್ನೈನ ಕಂಚೀಪುರಂನಲ್ಲಿರೋ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಸದಸ್ಯತ್ವ ಹೊಂದಿದ್ದಾರೆ. 2010ರಲ್ಲಿ ತಮ್ಮ ಬಳಿ ಇದ್ದ 131 ಗ್ರಾಂ ಚಿನ್ನವನ್ನ ಅಡವಿಟ್ಟು ಬ್ಯಾಂಕ್ ನಿಂದ 1ಲಕ್ಷದ 23 ಸಾವಿರ ರೂಪಾಯಿ ಸಾಲವನ್ನ ಪಡೆದಿದ್ದರು. ನಡುವೆ ಮತ್ತೆರಡು ಹೊಸ ಲೋನ್ ಗಳನ್ನ ಅದೇ ಬ್ಯಾಂಕ್ ನಿಂದ ತೆಗೆದುಕೊಂಡರು. ಆ ಎರಡೂ ಲೋನ್ ಗಳ ಮೊತ್ತ 1ಲಕ್ಷದ 65 ಸಾವಿರ ರುಪಾಯಿ.

ಮಾರ್ಚ್ 2011ರಲ್ಲಿ ಮೊದಲು ತೆಗೆದುಕೊಂಡಿದ್ದ ಸಾಲವನ್ನ ಕುಮಾರ್ ಮರುಪಾವತಿ ಮಾಡಿದ್ದಾರೆ. ಅನಂತರದಲ್ಲಿ ಮತ್ತೆರಡು ಲೋನ್ ಗಳನ್ನು ಹಂತ ಹಂತವಾಗಿ ತೀರಿಸಿದ್ದಾರೆ. ಲೋನ್ ಮುಗೀತಲ್ಲ ಚಿನ್ನವನ್ನು ವಾಪಸ್ಸು ಕೊಡಿ ಅಂತ ಕೇಳಿದ್ರೆ ಬ್ಯಾಂಕ್ ಅಧಿಕಾರಿಗಳು ಪ್ರತಿ ಲೋನ್ ಮೇಲೂ 1 ರೂಪಾಯಿ ಬಾಕಿ ಇದೆ. ಹಾಗಾಗಿ ಚಿನ್ನವನ್ನ ಕೊಡೋದಕ್ಕೆ ಅಗೋದಿಲ್ಲ ಅಂತ ಸಬೂಬು ಹೇಳ್ತಿದ್ದಾರೆ.

ಇದರಿಂದ ಕುಮಾರ್ ಅವರಿಗೆ ತಮ್ಮ ಚಿನ್ನ ಬ್ಯಾಂಕ್ ನಲ್ಲಿಯೇ ಇದೆಯೋ ಇಲ್ವೋ ಅನ್ನೋ ಅನುಮಾನ ಕಾಡಿದೆ. ಅದರಿಂದಾಗಿಯೇ ಅವರು ಕೋರ್ಟ್ ಮೂಲಕ ತಮ್ಮ ಚಿನ್ನವನ್ನು ವಾಪಸ್ಸು ಪಡೆಯೋಕೆ ಕೇಸು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...