alex Certify
ಕನ್ನಡ ದುನಿಯಾ       Mobile App
       

Kannada Duniya

ತಿಂಡಿ ರುಚಿಯಾಗಿಲ್ಲ ಎಂದ ಗ್ರಾಹಕನಿಗೆ ಇಂತಹ ಶಿಕ್ಷೆ

ಮುಂಬೈ: ತಿಂಡಿ ಸರಿಯಾಗಿಲ್ಲ ಎಂದು ದೂರಿದ ಗ್ರಾಹಕನ ಮೇಲೆ ಸಿಟ್ಟಾದ ವ್ಯಾಪಾರಿ, ಬಿಸಿ ಎಣ್ಣೆಯನ್ನು ಎರಚಿದ ಘಟನೆ ಮಹಾರಾಷ್ಟ್ರದ ಉಲ್ಲಾಸ್ ನಗರದಲ್ಲಿ ನಡೆದಿದೆ.

ಗ್ರಾಹಕನಿಗೆ ತೀವ್ರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಚೈನಿಸ್ ಫುಡ್ ವ್ಯಾಪಾರಿಯ ಬಳಿ ಗ್ರಾಹಕ ತಿಂಡಿ ರುಚಿಯಾಗಿಲ್ಲ ಎಂದು ದೂರಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇಷ್ಟಕ್ಕೆ ಆಕ್ರೋಶಗೊಂಡ ವ್ಯಾಪಾರಿ ಜಗ್ ನಿಂದ ಬಿಸಿ ಎಣ್ಣೆ ತುಂಬಿಸಿಕೊಂಡು ಗ್ರಾಹಕನ ಮೇಲೆ ಎರಚಿದ್ದಾನೆ.

ಈ ದೃಶ್ಯಗಳೆಲ್ಲಾ ಸಿ.ಟಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗ್ರಾಹಕ ಪೊಲೀಸರಿಗೆ ದೂರು ನೀಡಿದ್ದು, ವ್ಯಾಪಾರಿ ಕೂಡ ಪ್ರತಿ ದೂರು ನೀಡಿದ್ದಾನೆ.

ತನ್ನ ಅಂಗಡಿಯನ್ನು ಗ್ರಾಹಕ ಧ್ವಂಸ ಮಾಡಿದ್ದಾಗಿ ವ್ಯಾಪಾರಿ ದೂರು ದಾಖಲಿಸಿದ್ದಾನೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...