alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವು ಕಚ್ಚಿ ಜಾನಪದ ಕಲಾವಿದೆ ಸಾವು

ಪಶ್ಚಿಮ ಬಂಗಾಳದ ಬಾರಾಸಾತ್ ಎಂಬಲ್ಲಿ ಹಾವು ಕಚ್ಚಿ ಜಾನಪದ ಕಲಾವಿದೆಯೊಬ್ಬಳು ಸಾವಿಗೀಡಾಗಿದ ಘಟನೆ ನಡೆದಿದೆ.

ಹರುನ್ಹತ್ ಎಂಬ ಹಳ್ಳಿಯಲ್ಲಿ ಜಾತ್ರೆಯ ನಿಮಿತ್ತ ಜಾನಪದ ನಾಟಕ ಪ್ರದಶರ್ನವಿತ್ತು. ಈ ಪ್ರದರ್ಶನ ನಾಗದೇವತೆಗೆ ಸಂಬಂಧಿಸಿದ್ದಾದರಿಂದ ಅದರಲ್ಲಿ ಜೀವಂತ ಹಾವನ್ನೇ ಬಳಸಲಾಗಿತ್ತು. ಆದರೆ ಪ್ರದರ್ಶನದಲ್ಲಿ ಅವಘಡವೊಂದು ನಡೆದುಹೋಯಿತು.

ಪ್ರದರ್ಶನದಲ್ಲಿ ನಟಿಸುವಾಗಲೇ ಕಲಾವಿದೆ ಕಾಲಿದಾಸಿ ಮಂಡಲ್ ಎಂಬಾಕೆಗೆ ಆ ಹಾವು ಕಚ್ಚಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗದೇ 63 ವರ್ಷದ ಮಂಡಲ್ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ತಕ್ಷಣವೇ ಸಹ ಕಲಾವಿದರು ಸ್ಥಳೀಯ ಔಷಧಿ ಹಾಗೂ ಹಾವು ಕಚ್ಚಿದಾಗ ವಿಷ ತೆಗೆಯಲು ಬಳಸುವ ಪ್ರಸಿದ್ಧ ಮದ್ದು ಓಜ್ಹಾ ಹಚ್ಚಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...