alex Certify
ಕನ್ನಡ ದುನಿಯಾ       Mobile App
       

Kannada Duniya

ಮೇವು ಹಗರಣ : ನಾಲ್ಕನೇ ಪ್ರಕರಣದಲ್ಲೂ ಲಾಲು ಅಪರಾಧಿ

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಪಟ್ಟ ನಾಲ್ಕನೇ ಪ್ರಕರಣದಲ್ಲಿ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅಪರಾಧಿ ಎಂದು ವಿಶೇಷ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಆದ್ರೆ ದುಮ್ಕಾ ಖಜಾನೆ ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾರನ್ನು ಖುಲಾಸೆಗೊಳಿಸಿದೆ.

ಲಾಲು ಪ್ರಸಾದ್ ಯಾದವ್ ಬಿಹಾರದ ಸಿಎಂ ಆಗಿದ್ದ ಸಂದರ್ಭದಲ್ಲಿ ಜಗನ್ನಾಥ್ ಮಿಶ್ರಾ, ದುಮ್ಕಾ ಖಜಾನೆಯಿಂದ 3.13 ಕೋಟಿ ರೂಪಾಯಿ ವಿತ್ ಡ್ರಾ ಮಾಡಿದ್ದಾರೆ ಅನ್ನೋ ಆರೋಪವಿತ್ತು. 1990ರಲ್ಲಿ ಲಾಲು ಮುಖ್ಯಮಂತ್ರಿಯಾಗಿದ್ದಾಗ ನಡೆದ ಮೇವು ಹಗರಣಕ್ಕೆ ಸಂಬಂಧಿಸಿದಂತೆ 6 ಪ್ರಕರಣಗಳು ದಾಖಲಾಗಿದ್ದವು.

ಮೊದಲ ಪ್ರಕರಣದಲ್ಲಿ ಲಾಲು ಅಪರಾಧಿಯೆಂದು ಸಾಬೀತಾಗಿ 2013ರಲ್ಲಿ ಲಾಲೂ ಪ್ರಸಾದ್ ಗೆ 5 ವರ್ಷ ಜೈಲು ಶಿಕ್ಷೆಯಾಗಿತ್ತು. 2017ರಲ್ಲಿ ಮತ್ತೊಂದು ಕೇಸ್ ನಲ್ಲಿ 3.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಸದ್ಯ ಬಿರ್ಸಾ ಮುಂಡಾ ಕೇಂದ್ರೀಯ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...