alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರಿಗೊಂದು ಮಹತ್ವದ ಸುದ್ದಿ

ವಿಮಾನ ನಿಲ್ದಾಣದಲ್ಲಿ ನಡೆಯುವ ಸ್ಕ್ರೀನಿಂಗ್ ಪರೀಕ್ಷೆ ವೇಳೆ ಇನ್ಮುಂದೆ ಪರ್ಸ್, ಮೊಬೈಲ್, ಚಾರ್ಜರ್ ಹಾಗೂ ಬ್ಯಾಗ್ ನಲ್ಲಿರುವ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಬೇಕಾಗುತ್ತದೆ. ಈವರೆಗೆ ಕೇವಲ ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳನ್ನು ಮಾತ್ರ ಸ್ಕ್ರೀನಿಂಗ್ ಗೆ ಒಳಪಡಿಸಲಾಗ್ತಾಯಿತ್ತು.

ಮೊಬೈಲ್ ಸೇರಿದಂತೆ ಬ್ಯಾಗ್ ನಲ್ಲಿರುವ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ಕ್ರೀನಿಂಗ್ ಗಾಗಿ ಬೇರೆ ಟ್ರೇನಲ್ಲಿ ಇಡಬೇಕು. ಬೇರೆ ಗಾತ್ರದ ಪೆನ್ನುಗಳನ್ನು ಕೂಡ ಇಡಬೇಕಾಗುತ್ತದೆ. ಕೆಲ ದಿನಗಳ ಹಿಂದಷ್ಟೆ ಪೆನ್ ರೂಪದಲ್ಲಿದ್ದ ಚಾಕು ಪತ್ತೆಯಾಗಿತ್ತು. ಭದ್ರತೆ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಗ್ತಿದೆ.

ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಇದು ಶೀಘ್ರವೇ ಜಾರಿಗೆ ಬರಲಿದೆ. ಮೊದಲು ಬ್ಯಾಗ್ ಮಾತ್ರ ಸ್ಕ್ರೀನಿಂಗ್ ಮಾಡಲಾಗ್ತಾಯಿತ್ತು. ಅದ್ರಲ್ಲಿ ಅನುಮಾನಾಸ್ಪದ ವಸ್ತುವಿದೆ ಎಂಬ ಬಗ್ಗೆ ಸಿಗ್ನಲ್ ಸಿಕ್ಕಲ್ಲಿ ಎಲ್ಲ ವಸ್ತುವನ್ನು ಹೊರಗೆ ತೆಗೆಯಲಾಗ್ತಾಯಿತ್ತು. ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಪ್ರತಿಯೊಂದು ವಸ್ತುಗಳ ಸ್ಕ್ರೀನಿಂಗ್ ಗೆ ಮುಂದಾಗಿದ್ದೇವೆಂದು ಸಿಐಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...