alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ಭೇಟಿ ಮಾಡಲು ಬಂದ ಮಹಿಳೆಯ ಅವಾಂತರ

flower-pot-moss_020316031000

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯೊಬ್ಬರು ಅವಾಂತರ ಸೃಷ್ಟಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಇದರಿಂದಾಗಿ ಕೆಲಕಾಲ ಪೊಲೀಸರೂ ಗಲಿಬಿಲಿಗೆ ಒಳಗಾದರಾದರೂ ತಕ್ಷಣ ಕ್ರಮಕೈಗೊಂಡು ಮಹಿಳೆಯನ್ನು ಬಂಧಿಸಿದ್ದಾರೆ.

ಮಹಿಳೆಯೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಬಂದಿದ್ದು, ಅವರ ಭೇಟಿಗೆ ಅವಕಾಶ ನೀಡಬೇಕೆಂದು ಹೇಳಿ ಒಳನುಗ್ಗಲು ಯತ್ನಿಸಿದ್ದಾರೆ. ಇದಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ನೀಡದೇ, ವಾಪಸ್ ಕಳಿಸಿದ್ದಾರೆ. ನಂತರ ಮಹಿಳೆ ದಕ್ಷಿಣ ಭಾಗದ ಬಾಗಿಲಿನ ಮೂಲಕ ಪ್ರಭಾವಿಯೊಬ್ಬರ ಜೊತೆಗೆ ಹೆಜ್ಜೆಹಾಕುತ್ತಾ ಒಳಗೆ ಪ್ರವೇಶಿಸಿದ್ದಾರೆ. ಆದರೆ ಪ್ರಧಾನಿ ಮನೆ ಪ್ರವೇಶಿಸುವ ಮೊದಲು ಇರುವ ತಡೆಗೋಡೆ ದಾಟಿ ಹೋಗಲು ಆಕೆಗೆ ಸಾಧ್ಯವಾಗಿಲ್ಲ. ಇದನ್ನು ಗಮನಿಸಿದ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ಪೊಲೀಸರು ಪ್ರಧಾನಿ ನಿವಾಸಕ್ಕೆ ಬಿಡದ ಕಾರಣ ಆಕ್ರೋಶಗೊಂಡ ಮಹಿಳೆ ಮನೆಯ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ರಸ್ತೆಗೆ ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಜೊತೆಗೆ ಮಹಿಳೆ ವಾಗ್ವಾದ ನಡೆಸಿ ಹೂಕುಂಡ ಬಿಸಾಕಿದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...