alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯಾಘಾತದಿಂದ ವಿಮಾನದಲ್ಲೇ ಸಾವನ್ನಪ್ಪಿದ ಪ್ರಯಾಣಿಕ

ದೆಹಲಿಯಿಂದ ಮುಂಬೈಗೆ ಜೆಟ್ ಏರ್ ವೇಸ್ ನಲ್ಲಿ ಪ್ರಯಾಣಿಸುತ್ತಿದ್ದ 53 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ವಿಮಾನದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಭಾನುವಾರದಂದು 9W 376 ವಿಮಾನದಲ್ಲಿ ಮಹಮ್ಮದ್ ಅಫ್ರೋಜ್ ಅಹಮ್ಮದ್ ಎಂಬುವರು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದು, ಮಾರ್ಗ ಮಧ್ಯದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.

ಜೊತೆಗೆ ಉಸಿರಾಟದ ತೊಂದರೆಯೂ ಕಂಡು ಬಂದಿದ್ದು, ಆಕ್ಸಿಜನ್ ಮಾಸ್ಕ್ ನೀಡುವಂತೆ ಜೆಟ್ ಏರ್ ವೇಸ್ ಸಿಬ್ಬಂದಿಯನ್ನು ಕುಟುಂಬ ಸದಸ್ಯರು ವಿನಂತಿಸಿದರೂ ಅವರು ಸಕಾಲಕ್ಕೆ ಸ್ಪಂದಿಸಲಿಲ್ಲವೆನ್ನಲಾಗಿದೆ.

ಬಳಿಕ ಎಚ್ಚೆತ್ತ ವಿಮಾನ ಸಿಬ್ಬಂದಿ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರೊಬ್ಬರನ್ನು ಮಹಮ್ಮದ್ ರ ಚಿಕಿತ್ಸೆ ಗೆ ಕೋರಿದ್ದು, ಅಷ್ಟರಲ್ಲಾಗಲೆ ಅವರು ಸಾವನ್ನಪ್ಪಿದ್ದರು. ಮಹಮ್ಮದ್ ರ ಸಾವಿಗೆ ವಿಮಾನ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದು, ಇದನ್ನು ಜೆಟ್ ಏರ್ ವೇಸ್ ತಳ್ಳಿ ಹಾಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...