alex Certify
ಕನ್ನಡ ದುನಿಯಾ       Mobile App
       

Kannada Duniya

ಸುಖ್ನಾ ಸರೋವರದಲ್ಲಿ ಮಕ್ಕಳ ಫ್ಲಾಶ್ ಮಾಬ್, ಅವರ ಥೀಮ್ ಏನಿತ್ತು ಗೊತ್ತಾ?

200 ವಿದ್ಯಾರ್ಥಿಗಳು ಸುಖ್ನಾ ಸರೋವರದಲ್ಲಿ ಒಟ್ಟು ಸೇರಿ ಫ್ಲಾಶ್ ಮಾಬ್ ನಡೆಸಿದ್ದರು. ಅವರು ನಿವಾಸಿಗಳಲ್ಲಿ ದೇಶದ ಸಬಲೀಕರಣದ ಸಂದೇಶವನ್ನು ಉತ್ತೇಜಿಸುವ ಗುರಿ ಹೊಂದಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ, ಆಂದೋಲನದ ಸ್ವಾತಂತ್ರ್ಯ ಹಾಗೂ ಪ್ರಗತಿಯತ್ತ ಸ್ವಾತಂತ್ರ್ಯವನ್ನು ಉತ್ತೇಜಿಸುವ ಗುರಿಯೂ ಅವರದಾಗಿತ್ತು. ಪ್ರಚಲಿತ ಸಮಸ್ಯೆಗಳು ಹಾಗೂ ಭಾರತದ ಸಬಲೀಕರಣದತ್ತ ಪರಿಹಾರಗಳನ್ನು ಈ ಫ್ಲಾಶ್ ಮಾಬ್ ಬಿಂಬಿಸಿದ್ದವು.

ಈ ವೇಳೆ ಮಾತನಾಡಿದ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷ ರಶ್ಪಾಲ್ ಸಿಂಗ್ ಧಲಿವಾಲ್, ನಾವು ಮಕ್ಕಳು ಹಾಗೂ ಮಹಿಳೆಯರ ಸಬಲೀಕರಣದಲ್ಲಿ ನಂಬಿಕೆ ಹೊಂದಿದ್ದೇವೆ, ಅವರನ್ನು ಉತ್ತಮ ಹೊಂದಾಣಿಕೆಯ ಮಾನವರಾಗಿಸುವ ಹಾಗೂ ಅವರು ಉತ್ತಮ ಭವಿಷ್ಯವನ್ನು ಹೊಂದುವ ಪ್ರಯತ್ನ ನಾವು ಮಾಡುತ್ತೇವೆ. ನಾವು ಒಂದು ಸುರಕ್ಷಿತ, ಆರೋಗ್ಯಕರ ಹಾಗೂ ಪೋಷಕ ವಾತಾವರಣವನ್ನು ಮಕ್ಕಳು ಮತ್ತು ಮಹಿಳೆಯರಿಗೆ ಕಲ್ಪಿಸಿದಾಗಲಷ್ಟೇ ಇದು ಸಾಧ್ಯವಾಗುತ್ತದೆ. ದೇಶದ ಪ್ರಗತಿಯೊಂದಿಗೆ ಹೆಜ್ಜೆ ಹಾಕಲು ಅವರಿಗೆ ನೆರವಾಗಬೇಕು ಎಂದರು.

ನಮ್ಮ ದೇಶದ ಭವಿಷ್ಯದ ಪೀಳಿಗೆಯ ಒಟ್ಟಾರೆ ಅಭಿವೃದ್ಧಿಗಾಗಿ ಸಮಗ್ರ ವಿಧಾನವನ್ನು ನಾವು ಅನುಸರಿಸುತ್ತೇವೆ. ಶಾರೀರಿಕ, ಮಾನಸಿಕ, ಪೌಷ್ಟಿಕ, ಸಾಮಾಜಿಕ ಹಾಗೂ ಕ್ರಿಯಾಶೀಲ ದೃಷ್ಟಿಯಿಂದ ಆರೋಗ್ಯವನ್ನು ನಾವು ಕಾಪಾಡುತ್ತೇವೆ ಎಂದು ರಶ್ಪಾಲ್ ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...