alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಚಿತ್ತ ಪಂಚರಾಜ್ಯ ಚುನಾವಣಾ ಫಲಿತಾಂಶದತ್ತ

up-election_14ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ್ ಮತ್ತು ಮಣಿಪುರ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ನಾಳೆ ಹೊರ ಬೀಳಲಿದೆ. ಮಿನಿ ಮಹಾ ಸಮರವೆಂದೇ ಪರಿಗಣಿಸಲಾಗಿರುವ ಈ ಚುನಾವಣಾ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎನ್ನಲಾಗುತ್ತಿದ್ದು, ಅದರಲ್ಲೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಚುನಾವಣೋತ್ತರ ಸಮೀಕ್ಷೆಗಳು ಏನೇ ಇದ್ದರೂ ಮತದಾರ ಯಾರಿಗೆ ಮನ್ನಣೆ ನೀಡಿದ್ದಾರೆಂಬ ರಹಸ್ಯ ಅಂತಿಮ ಫಲಿತಾಂಶದ ಬಳಿಕ ಬಹಿರಂಗವಾಗಲಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕಳೆದ ನವೆಂಬರ್ ನಲ್ಲಿ 1000 ರೂ. ಹಾಗೂ 2000 ರೂ. ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ನಡೆದ ಈ ಚುನಾವಣೆಯಲ್ಲಿ ಮೋದಿಯವರ ನಿರ್ಧಾರಕ್ಕೆ ಮತದಾರ ಮನ್ನಣೆ ನೀಡುತ್ತಾನೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಈ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿ ಬಹುಮತ ಗಳಿಸಿದರೆ ಅದರ ಸಂಪೂರ್ಣ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆಯಲ್ಲದೇ ಆರ್ಥಿಕ ಸುಸ್ಥಿರತೆಗೆ ಮೋದಿಯವರು ಕೈಗೊಂಡ ನಿರ್ಧಾರಗಳಿಗೆ ಮತದಾರರ ಒಲವಿದೆ ಎಂಬುದು ಸಾಬೀತಾಗಲಿದೆ. ವ್ಯತಿರಿಕ್ತ ಫಲಿತಾಂಶ ಬಂದಲ್ಲಿ ರಾಷ್ಟ್ರ ರಾಜಕೀಯದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ನಾಳಿನ ಚುನಾವಣಾ ಫಲಿತಾಂಶ ಹಲವು ತಿರುವುಗಳಿಗೆ ಕಾರಣವಾಗುತ್ತದೆಂಬುದು ಮಾತ್ರ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...