alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗಳ ಫೈವ್ ಸ್ಟಾರ್ ಹೊಟೇಲ್ ನಲ್ಲಿದೆ ಬಿಯರ್, ವಿಐಪಿ ಆಹಾರ

ಸಾಮಾನ್ಯವಾಗಿ ಸಾಕು ಪ್ರಾಣಿಗಳನ್ನು ಎಲ್ಲರೂ ಇಷ್ಟಪಡ್ತಾರೆ. ಮನುಷ್ಯರಂತೆ ಸಾಕು ಪ್ರಾಣಿಗಳನ್ನು ತುಂಬಾ ಪ್ರೀತಿ ಮಾಡುವವರಿದ್ದಾರೆ. ಸಾಕು ಪ್ರಾಣಿಗಳಿಗೆ ಮನೆ, ವಿಶೇಷ ಆಹಾರ, ಸೌಲಭ್ಯಗಳನ್ನು ಒದಗಿಸಿ ಮಕ್ಕಳಂತೆ ನೋಡಿಕೊಳ್ಳುವವರಿಗೇನು ಕಡಿಮೆಯಿಲ್ಲ.

ಸಾಕು ಪ್ರಾಣಿ ಅದ್ರಲ್ಲೂ ನಾಯಿಯನ್ನು ಮುದ್ದಾಡುವ ಜನರಿಗೊಂದು ಖುಷಿ ಸುದ್ದಿ. ನಾಯಿಗಳಿಗಾಗಿ ಭಾರತದಲ್ಲಿ ವಿಶೇಷ ಹೊಟೇಲ್ ಶುರುವಾಗಿದೆ. ಹರ್ಯಾಣದ ಗುರುಗ್ರಾಮ್ ನಲ್ಲಿರುವ ಈ ಹೊಟೇಲ್ ಹೆಸರು ಕ್ರಿಯೇಚರ್.

ಈ ಹೊಟೇಲ್ ನಲ್ಲಿ ಒಂದು ರಾತ್ರಿ ಉಳಿಯಲು 4500 ರೂಪಾಯಿ ನೀಡಬೇಕು. ರೂಂನಲ್ಲಿ ಐಷಾರಾಮಿ ಸೌಲಭ್ಯವಿದೆ. ಪ್ರತ್ಯೇಕ ಬಾಲ್ಕನಿಗಳಿದ್ದು, ಮೇಲ್ಛಾವಣಿಯಲ್ಲಿ ಈಜುಕೊಳವಿದೆ. ಬಿಯರ್ ಜೊತೆಗೆ ವಿಐಪಿಗಳಿಗೆ ನೀಡುವ ಆಹಾರವನ್ನು ಇಲ್ಲಿ ನಾಯಿಗಳಿಗೆ ನೀಡಲಾಗಿತ್ತದೆ.

ದೀಪಕ್ ಚಾವ್ಲಾ ಈ ಹೊಟೇಲ್ ಮಾಲೀಕರು. ದೀಪಕ್ ಬಳಿ ಒಂದು ಸಾಕು ನಾಯಿಯಿತ್ತಂತೆ. ದೀಪಕ್ ಹೊರಗೆ ಹೋಗುವಾಗ ನಾಯಿಯನ್ನು ಎಲ್ಲಿ ಬಿಡಬೇಕೆಂಬ ಚಿಂತೆ ಕಾಡುತ್ತಿತ್ತಂತೆ. ಇದೇ ಚಿಂತೆಯಲ್ಲಿದ್ದ ದೀಪಕ್ ನಾಯಿಗಾಗಿ ಹೊಟೇಲ್ ತೆರೆಯುವ ನಿರ್ಧಾರ ಕೈಗೊಂಡರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...