alex Certify
ಕನ್ನಡ ದುನಿಯಾ       Mobile App
       

Kannada Duniya

ಉಸ್ತಾದ್ ಬಿಸ್ಮಿಲ್ಲಾ ಖಾನ್ ರ ಬೆಳ್ಳಿ ಶಹನಾಯಿ ಚೋರಿ

ustad-bismillah-khan1

ದಿವಂಗತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 5 ಬೆಳ್ಳಿಯ ಶಹನಾಯಿ ಸೇರಿದಂತೆ ವಿವಿಧ ಪ್ರಶಸ್ತಿ, ಪುರಸ್ಕಾರಗಳು ಕಳವಾಗಿವೆ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮಗ ಕಾಜಿಮ್ ಹುಸೈನ್ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಖಾಜಿಮ್ ನವೆಂಬರ್ 30ರಂದು ತಮ್ಮ ಪೂರ್ವಜರ ಮನೆಗೆ ತೆರಳಿದ್ರು. ಭಾನುವಾರ ರಾತ್ರಿ ಮನೆಗೆ ಮರಳಿದ್ದಾರೆ. ಅವರು ಬರುವಷ್ಟರಲ್ಲಿ ಮನೆಯ ಬೀಗ ಒಡೆದಿತ್ತು, ಒಳಗಡೆ ಇದ್ದ 5 ಬೆಳ್ಳಿಯ ಶಹನಾಯಿ ಹಾಗೂ ಇತರ ಪ್ರಶಸ್ತಿಗಳು ಮಾಯವಾಗಿದ್ದವು.

ಎಂ ಎಲ್ ಸಿ ಶತ್ರುದ್ರ ಪ್ರಸಾದ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ ಕಾಜಿಮ್, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆರಳಚ್ಚು ತಜ್ಱರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದೆ. ಕಳವಾದ ಶಹನಾಯಿಗಳಲ್ಲಿ ಒಂದು ಅತ್ಯಂತ ವಿಶೇಷವಾಗಿತ್ತು, ಬಿಸ್ಮಿಲ್ಲಾ ಖಾನ್ ಅದನ್ನು ಮೊಹರಂನ 5 ಮತ್ತು 7ನೇ ದಿನ ನುಡಿಸುತ್ತಿದ್ದರು ಅಂತಾ ಕಾಜಿಮ್ ಮಾಹಿತಿ ನೀಡಿದ್ದಾರೆ.

ಕಳವಾದ ಐದರ ಪೈಕಿ 3 ಶಹನಾಯಿಗಳನ್ನು ಮಾಜಿ ಪ್ರಧಾನಿ ನರಸಿಂಹ ರಾವ್, ಆರ್ ಜೆ ಡಿಯ ಲಾಲೂ ಪ್ರಸಾದ್ ಯಾದವ್, ಕಪಿಲ್ ಸಿಬಲ್ ಅವರು ಬಿಸ್ಮಿಲ್ಲಾ ಖಾನ್ ಅವರಿಗೆ ಬಹುಮಾನವಾಗಿ ಕೊಟ್ಟಿದ್ದರು. ತಮ್ಮ ತಂದೆಯ ಅಮೂಲ್ಯ ವಸ್ತುಗಳನ್ನೆಲ್ಲ ಕಾಜಿಮ್ ಇತ್ತೀಚೆಗಷ್ಟೆ ದಾಲ್ಮಂಡಿಯಲ್ಲಿರುವ ಹೊಸ ಮನೆಗೆ ಸ್ಥಳಾಂತರಿಸಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...