alex Certify
ಕನ್ನಡ ದುನಿಯಾ       Mobile App
       

Kannada Duniya

ರಣರಂಗವಾಯ್ತು ಮದುವೆ ಮನೆ : ಓರ್ವನ ಸಾವು

ಉತ್ತರ ಪ್ರದೇಶದ ಬಲಿಯಾದ ಮದುವೆ ಮನೆಯೊಂದರಲ್ಲಿ ಆಹಾರ ಸೇವಿಸುವ ವಿಚಾರಕ್ಕೆ ನಡೆದ ಗಲಾಟೆ ಒಬ್ಬನ ಬಲಿ ಪಡೆದಿದೆ. ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಶನಿವಾರ ಮದುವೆ ನಿಶ್ಚಿತವಾಗಿತ್ತು. ಸಂಜೆ 8 ಗಂಟೆಗೆ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಜೊತೆಯಲ್ಲಿ ಊಟದ ವ್ಯವಸ್ಥೆಯಾಗಿತ್ತು. ಗ್ರಾಮದ ಕೆಲ ಯುವಕರು ಊಟಕ್ಕೆಂದು ಬಂದಿದ್ದಾರೆ. ಊಟದ ಎಲೆ ಕಡಿಮೆಯಿದೆ. ಕೆಲವೇ ಕ್ಷಣಗಳಲ್ಲಿ ತರುತ್ತೇವೆಂದು ಪರಿಚಾಲಕರು ಹೇಳಿದ್ದಾರೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ.

ಕೆಲ ಹೊತ್ತಿನಲ್ಲಿಯೇ ಜಗಳ ಶಾಂತವಾಗಿದೆ. ಆದ್ರೆ ಯುವಕರು ಗ್ರಾಮಸ್ಥರಿಗೆ ವಿಷ್ಯ ತಿಳಿಸಿದ್ದಾರೆ. ಗ್ರಾಮಸ್ಥರು ಕೋಲು ಹಿಡಿದು ಮದುವೆ ಮನೆಗೆ ಬಂದಿದ್ದಲ್ಲದೆ ಅಡುಗೆ ತಯಾರಕರು ಹಾಗೂ ಪರಿಚಾಲಕರ ಜೊತೆ ಗಲಾಟೆಗಿಳಿದಿದ್ದಾರೆ. ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿತ್ತು. ದಾರಿ ಮಧ್ಯೆ ಯುವಕ ಸಾವನ್ನಪ್ಪಿದ್ದಾನೆ. ಆರೋಪಿಗಳು ನಾಪತ್ತೆಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...