alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಚ್ಚಿಹೋಗಿದ್ದ ಕಾರನ್ನು ಹುಡುಕಿಕೊಟ್ಟ ಮ್ಯಾಗ್ನೆಟ್

ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಐದು ದಿನಗಳಾಗಿದ್ದರೂ ಪತ್ತೆಯಾಗಿರದಿದ್ದ ಕಾರನ್ನು 20 ಕೆ.ಜಿ. ತೂಕದ ಅಯಸ್ಕಾಂತ ಪತ್ತೆ ಹಚ್ಚಿದೆ. ಆ ಮೂಲಕ ಕಾರಿನಲ್ಲಿದ್ದ ಐವರ ಮೃತದೇಹವೂ ಪತ್ತೆಯಾಗಿದ್ದು, ಶವಗಳು ಕೊಳೆತ ಸ್ಥಿತಿಯಲ್ಲಿದ್ದವು ಎಂದು ವರದಿಯಾಗಿದೆ.

ಅಸ್ಸಾಮ್‍ನ ಶಿವ್‍ಸಾಗರ್ ಜಿಲ್ಲೆಯ ದಿಖೌ ನದಿಯ ಅಡ್ಡಗೋಡೆ ಒಡೆದು ಹೋಗಿ ಉಂಟಾಗಿದ್ದ ಪ್ರವಾಹದಲ್ಲಿ ಶನಿವಾರ ಕಾರೊಂದು ಕೊಚ್ಚಿ ಹೋಗಿತ್ತು.

ದುರ್ಘಟನೆ ಸಂಭವಿಸಿದ ಬಳಿಕ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಸ್ಪಂದನಾ ದಳದ ಜೊತೆಗೆ ಸೇನೆ ಹಾಗೂ ನೌಕಾದಳದ ಸಿಬ್ಬಂದಿ ಐದು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಿದ್ದರೂ ಕಾರು ಪತ್ತೆ ಆಗಿರಲಿಲ್ಲ.

ಆದರೆ ವಿಪತ್ತು ಸ್ಪಂದನಾ ದಳದ ಮುಳುಗುತಜ್ಞರು ಬುಧವಾರ 20 ಕೆ.ಜಿ. ಭಾರದ ಅಯಸ್ಕಾಂತದ ತುಂಡಿನೊಂದಿಗೆ ಶೋಧಕ್ಕಿಳಿದಾಗ ಕಳಚಿಹೋಗಿದ್ದ ಕಾರಿನ ಬಂಪರ್ ಗೆ ಮ್ಯಾಗ್ನೆಟ್ ಅಂಟಿಕೊಂಡಿದೆ. ಬಳಿಕ ಹೆಚ್ಚಿನ ಸಿಬ್ಬಂದಿಯ ನೆರವಿನೊಂದಿಗೆ ಮತ್ತಷ್ಟು ತೀವ್ರವಾಗಿ ಶೋಧ ನಡೆಸಿದಾಗ ದಿಂಚಿಯಲ್ ಗ್ರಾಮದಲ್ಲಿ ಅಪಘಾತ ಸಂಭವಿಸಿದ 300 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...