alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 11 ಕೆಜಿ ಚಿನ್ನ ವಶಕ್ಕೆ

ದೆಹಲಿ: ವಿದೇಶದಿಂದ ಬಂಗಾರ ಕಳ್ಳಸಾಗಣೆ ಮಾಡುತ್ತಿದ್ದ ಐವರನ್ನು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು‌ ಬಂಧಿಸಿದ್ದು, ಅವರಿಂದ ಮೂರು ಕೋಟಿಗೂ‌ ಹೆಚ್ಚು ಮೌಲ್ಯದ ಬಂಗಾರವನ್ನು ವಶಕ್ಕೆ‌‌ ಪಡೆದಿದ್ದಾರೆ.

ವಿದೇಶದಿಂದ ವಿಶಾಖಪಟ್ಟಣಕ್ಕೆ ಬಂದು,‌ ಅಲ್ಲಿಂದ ದೆಹಲಿ‌ ಮೂಲಕ ದೇಶದ ವಿವಿಧ ಭಾಗಗಳಿಗೆ, ಅಕ್ರಮವಾಗಿ ತಂದಿದ್ದ‌ ಬಂಗಾರವನ್ನು ರವಾನಿಸುವ ಯೋಜನೆಯಲ್ಲಿ‌ ಆರೋಪಿಗಳಿದ್ದರು. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ಪರಿಶೀಲನೆ ವೇಳೆ ಅಕ್ರಮವಾಗಿ ತಂದಿದ್ದ ಬಂಗಾರ ಪತ್ತೆ ಹಚ್ಚಲಾಗಿದೆ ಎಂದು ಸುಂಕ‌ ಅಧಿಕಾರಿಗಳು‌ ತಿಳಿಸಿದ್ದಾರೆ.

ಒಂದು ಕೆಜಿ ಭಾರದ ಏಳು‌ ಬಂಗಾರದ ಗಟ್ಟಿ ಸೇರಿದಂತೆ ಒಟ್ಟು 11 ಕೆಜಿ‌ ತೂಕದ ಬಂಗಾರ ವಶಕ್ಕೆ ಪಡೆದುಕೊಳ್ಳಲಾಗಿದೆ.‌ ಬಂಧಿತರು ಈ‌ ಹಿಂದೆಯೂ ಸುಮಾರು 19.5 ಕೋಟಿ ಮೌಲ್ಯದ 64.5 ಕೆಜಿ ಬಂಗಾರವನ್ನು ಇದೇ ರೀತಿ‌ ಸಾಗಿಸಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...