alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಬಂದ ಐವರ ಮೇಲೆ ಅತ್ಯಾಚಾರ

ಜಾರ್ಖಂಡ್ ನ ಕುಂಟಿ ಜಿಲ್ಲೆಯ ಅಡಕಿ ಠಾಣಾ ವ್ಯಾಪ್ತಿಯಲ್ಲಿ ಐದು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಘಟನೆ ಜೂನ್ 19 ರಂದು ನಡೆದಿದೆ ಎನ್ನಲಾಗಿದೆ. ಆಶಾ ಕಿರಣ್ ಖಾಸಗಿ ಸಾಮಾಜಿಕ ಸಂಘಟನೆ ಕಾರ್ಯಕರ್ತೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. ಕಾರ್ಯಕರ್ತೆಯರು ಮಾನವ ಕಳ್ಳಸಾಗಣೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮಕ್ಕೆ ಬಂದಿದ್ದರು.

ಆಶಾ ಕಿರಣದ 11 ಸದಸ್ಯರು ಮಾನವ ಕಳ್ಳಸಾಗಣೆ ವಿರುದ್ಧ ಬೀದಿ ನಾಟಕವಾಡುತ್ತಿದ್ದರು. ಬೈಕ್ ನಲ್ಲಿ ಬಂದ 4-5 ಮಂದಿ ಗನ್ ತೋರಿಸಿ ಹುಡುಗಿಯರನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಹುಡುಗಿಯರ ಜೊತೆಗಿದ್ದ ಪುರುಷರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಐವರು ಯುವತಿಯರ ವೈದ್ಯಕೀಯ ಪರೀಕ್ಷೆ ನಡೆದಿದೆ. ವರದಿಯಲ್ಲಿ ಅತ್ಯಾಚಾರ ನಡೆದಿರುವುದು ಬಹಿರಂಗವಾಗಿದೆ. 6 ಮಂದಿ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...